Thursday, July 23, 2026
spot_imgspot_img
spot_imgspot_img

ಕಲ್ಲಡ್ಕ ವಲಯ ಬಂಟರ ಸಂಘದ ಅಧ್ಯಕ್ಷರಾಗಿ ಗಣೇಶ್ ಶೆಟ್ಟಿ ಗೊಳ್ತಮಜಲು, ಕಾರ್ಯದರ್ಶಿಯಾಗಿ ನಾಗೇಶ್ ಶೆಟ್ಟಿ ಬೊಂಡಾಲ, ಗೌರವಾಧ್ಯಕ್ಷರಾಗಿ ಪದ್ಮನಾಭ ರೈ ಕಲ್ಲಡ್ಕ

- Advertisement -
- Advertisement -

ಯುವ ಬಂಟರ ಸಂಘದ ಅಧ್ಯಕ್ಷರಾಗಿ ಸುನಾದ್ ರಾಜ್ ಶೆಟ್ಟಿ ಬೊಂಡಾಲ ಅಂತರ ಗುತ್ತು, ಕಾರ್ಯದರ್ಶಿಯಾಗಿ ನಿಶಾಂತ್ ರೈ ನಡ್ಚಾಲು

ಮಹಿಳಾ ಬಂಟರ ಸಂಘದ ಅಧ್ಯಕ್ಷರಾಗಿ ನೀನಾ ಉದಯ ರೈ, ಕಾರ್ಯದರ್ಶಿಯಾಗಿ ಶೋಭಾ ಶೆಟ್ಟಿ

ಕಲ್ಲಡ್ಕ ವಲಯ ಬಂಟರ ಸಂಘದ ವಾರ್ಷಿಕ ಮಹಾ ಸಭೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ 13-07-2025 ನೇ ಆದಿತ್ಯವಾರ ಪದ್ಮನಾಭ ರೈ ಕಲ್ಲಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ ಡಿ ಶೆಟ್ಟಿ ರಂಗೋಲಿ ಮತ್ತು ಕಾರ್ಯದರ್ಶಿಗಳಾದ ಜಗನ್ನಾಥ ಚೌಟ ಬದಿಗುಡ್ಡೆ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ನೂತನ ಪದಾಧಿಕಾರಿಗಳಿಗೆ ಶುಭಾಶಯ ಕೋರಿದರು.

ಕಲ್ಲಡ್ಕ ವಲಯ ಬಂಟರ ಸಂಘದ ನೂತನ ಸಮಿತಿಯ ಅಧ್ಯಕ್ಷರಾಗಿ ಗಣೇಶ್ ಶೆಟ್ಟಿ ಗೊಳ್ತಮಜಲು, ಗೌರವಾಧ್ಯಕ್ಷರಾಗಿ ಪದ್ಮನಾಭ ರೈ ಕಲ್ಲಡ್ಕ, ಕಾರ್ಯದರ್ಶಿಯಾಗಿ ನಾಗೇಶ್ ಶೆಟ್ಟಿ ಬೊಂಡಾಲ, ಕೋಶಾಧಿಕಾರಿಯಾಗಿ ಸುರೇಶ್ ಶೆಟ್ಟಿ ಕಾಂದಿಲ, ಜೊತೆಕಾರ್ಯದರ್ಶಿಯಾಗಿ ಸಂತೋಷ ಶೆಟ್ಟಿ ಶೀನಾಜೆ, ಜತೆ ಕೋಶಾಧಿಕಾರಿ ಯಾಗಿ ಶರತ್ ಶೆಟ್ಟಿ ಕಕ್ಕೆಮಜಲು, ಉಪಾಧ್ಯಕ್ಷರಾಗಿ ಪ್ರೇಮನಾಥ್ ಶೆಟ್ಟಿ ಕೋರ್ಯ, ದೇವಿ ಪ್ರಸಾದ್ ಶೆಟ್ಟಿ ಬೆಂಜೆಂತಿಮಾರ್, ರತ್ನಾಕರ ಶೆಟ್ಟಿ ಕಲ್ಲಡ್ಕ ಆಯ್ಕೆಯಾದರು.

ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಹೇಶ್ ಶೆಟ್ಟಿ ನೆಟ್ಲ, ಜತೆ ಸಾಂಸ್ಕೃತಿಕ ಕಾರ್ಯದರ್ಶಿ ಸಂದೀಪ್ ಶೆಟ್ಟಿ ಮುಲಾರು, ಕ್ರೀಡಾ ಕಾರ್ಯದರ್ಶಿಯಾಗಿ ಆನಂದ ಶೆಟ್ಟಿ ಕಾಂಪ್ರಬೈಲು ಆಯ್ಕೆಯಾದರು.

ಯುವ ವಿಭಾಗದ ಅಧ್ಯಕ್ಷರಾಗಿ ಸುನಾದ್ ರಾಜ್ ಶೆಟ್ಟಿ ಬೊಂಡಾಲ ಅಂತರ ಗುತ್ತು, ಕಾರ್ಯದರ್ಶಿಯಾಗಿ ನಿಶಾಂತ್ ರೈ ನಡ್ಚಾಲು, ಕೋಶಾಧಿಕಾರಿಯಾಗಿ ಕೌಶಿಲ್ ಶೆಟ್ಟಿ ಅಮ್ಟೂರು ಆಯ್ಕೆಯಾದರು.

ಮಹಿಳಾ ವಿಭಾಗದ ಅಧ್ಯಕ್ಷರಾಗಿ ನೀನಾ ಉದಯ ರೈ, ಕಾರ್ಯದರ್ಶಿಯಾಗಿ ಶೋಭಾ ಶೆಟ್ಟಿ , ಕೋಶಾಧಿಕಾರಿಯಾಗಿ ಮಲ್ಲಿಕಾ ಶೆಟ್ಟಿ ಬೆಂಜೆಂತಿಮಾರ್ ರವರನ್ನು ಆಯ್ಕೆ ಮಾಡಲಾಯಿತು.

ನಿರ್ಗಮಿತ ಅಧ್ಯಕ್ಷರಾದ ಪದ್ಮನಾಭ ರೈರವರು ಪ್ರಸ್ತಾವಿಕ ಮಾತಿನ ಜೊತೆಗೆ ಸ್ವಾಗತಿಸದರು. ನಾಗೇಶ್ ಶೆಟ್ಟಿ ಬೊಂಡಾಲ ವಂದಿಸಿದರು. ಕ್ರೀಡಾ ಸಂಚಾಲಕ ಜಗದೀಶ ಶೆಟ್ಟಿ ನಡುವಲಚ್ಚಿಲು ಕಾರ್ಯಕ್ರಮ ನಿರ್ವಹಿಸಿದರು.

- Advertisement -

Related news

error: Content is protected !!