Wednesday, May 1, 2024
spot_imgspot_img
spot_imgspot_img

ಮಂಗಳೂರು: ದುಬೈನಿಂದ ಚಿನ್ನದ ಪುಡಿ ಸಾಗಾಟ

- Advertisement -G L Acharya panikkar
- Advertisement -

ಮಂಗಳೂರು: ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 242 ಗ್ರಾಂ ತೂಕದ, 14.50 ಲಕ್ಷ ರೂ ಮೌಲ್ಯದ ಚಿನ್ನದ ಪೌಡರ್‌ನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ದುಬೈನಿಂದ ಏರ್‌ಇಂಡಿಯಾ ವಿಮಾನದಲ್ಲಿ ಬರುತ್ತಿದ್ದ ಪ್ರಯಾಣಿಕ ಚಿನ್ನದ ಪುಡಿಯನ್ನು ರಟ್ಟಿನ ಬಾಕ್ಸ್‌ನೊಳಗೆ ನಾಲ್ಕು ಕಾರ್ಬನ್‌ ಪೇಪರ್‌ಗಳಲ್ಲಿ ಸುತ್ತಿಟ್ಟು ಸಾಗಿಸುತ್ತಿದ್ದ. ಸಂಶಯದ ಮೇರೆಗೆ ಪರಿಶೀಲಿಸಿದಾಗ ಅಕ್ರಮ ಚಿನ್ನದ ಸಾಗಾಟ ಜಾಲ ಪತ್ತೆಯಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!