Saturday, June 13, 2026
spot_imgspot_img
spot_imgspot_img

*ಮನೆಗೆ ಹಿಂತಿರುಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಎಗರಿಸಿ, ಪರಾರಿ*

- Advertisement -
- Advertisement -

ವಿಟ್ಲ: ದ್ವಿಚಕ್ರದಲ್ಲಿ ಬಂದ ವ್ಯಕ್ತಿಯೋರ್ವ ಬೀಡಿ ಕೊಟ್ಟು ಮನೆಗೆ ಮರಳುತ್ತಿದ್ದ  ಮಹಿಳೆಯೊಬ್ಬ ಕುತ್ತಿಗೆಯಿಂದ ಚಿನ್ನದ ಕರಿಮಣಿಸರವನ್ನು ಎಳೆದು ಪರಾರಿಯಾದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಬಳಿಯ ಮರುವಾಳ ಎಂಬಲ್ಲಿ ನಡೆದಿದೆ.

ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಸಮೀಪದ ಮರುವಾಳ ನಿವಾಸಿ ತೋಮಸ್ ರೆಬೆಲ್ಲೋ ರವರ ಪತ್ನಿ ಮಿನೆಜಸ್ ರವರು ದೂರುದಾರರಾಗಿದ್ದಾರೆ.

ಸೆ.೨೨ರಂದು ಮದ್ಯಾಹ್ನದ ವೇಳೆ ನಾನು ಬೀಡಿಕೊಟ್ಟು ಮನೆಗೆ ಹಿಂದಿರುಗುತ್ತಿದ್ದ ವೇಳೆ ಕುಂಡಡ್ಕ ಭಾಗದಿಂದ ದ್ವಿಚಕ್ರವಾಹನದಲ್ಲಿ ಬಂದ ವ್ಯಕ್ತಿಯೋರ್ವ ನನ್ನ ಕುತ್ತಿಗೆಯಲ್ಲಿದ್ದ ೪ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಎಳೆದು ಪರಾರಿಯಾಗಿದ್ದಾನೆ ಎಂದು ಅವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.  ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!