Friday, March 29, 2024
spot_imgspot_img
spot_imgspot_img

1,533 ರೂ. ಕುಸಿದ ಬೆಳ್ಳಿ ದರ :ಬಂಗಾರದ ದರದಲ್ಲೂ ಭಾರಿ ಕುಸಿತ!

- Advertisement -G L Acharya panikkar
- Advertisement -

ನವದೆಹಲಿ :  ರಾಷ್ಟ್ರ ರಾಜಧಾನಿಯಲ್ಲಿ ಚಿನ್ನವು ಸೋಮವಾರ 10 ಗ್ರಾಂ. ಮೇಲೆ 302 ರೂ.ಯಿಂದ ಕುಸಿದು 44,269 ರೂ.ಗೆ ತಲುಪಿದೆ. ಇದು ಜಾಗತಿಕ ಚಿನಿವಾರ ಪೇಟೆಯಲ್ಲಿ ಬೆಲೆಯ ಕುಸಿತ ಮತ್ತು ರೂಪಾಯಿ ವೃದ್ಧಿಯ ಪ್ರತಿಬಿಂಬವಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.

ಹಿಂದಿನ ವಹಿವಾಟಿನಲ್ಲಿ ಚಿನ್ನವು 10 ಗ್ರಾಂ. ಮೇಲೆ ಗರಿಷ್ಠ ಬೆಲೆ 44,571 ರೂ.ಗಳಲ್ಲಿ ವಹಿವಾಟು ನಡೆಸುತ್ತಿತ್ತು. ಹಿಂದಿನ ವಹಿವಾಟಿನಲ್ಲಿ ಬೆಳ್ಳಿ ಕೆ.ಜಿ.ಗೆ 66,852 ರೂ. ಇದ್ದದ್ದು ಇಂದು 1,533 ರೂ. ಕುಸಿದು 65,319 ರೂ.ಗೆ ತಲುಪಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,731 ಡಾಲರ್‌ ಹಾಗೂ ಬೆಳ್ಳಿ ಔನ್ಸ್‌ಗೆ 25.55 ಡಾಲರ್‌ನಲ್ಲಿ ವಹಿವಾಟು ನಿರತವಾಗಿದೆ. ಈ ವಾರ ಅಮೆರಿಕದ ಬಾಂಡ್ ಹರಾಜಿನ ಮೇಲೆ ವ್ಯಾಪಾರಿಗಳು ಮತ್ತು ಹೂಡಿಕೆದಾರರು ಗಮನಹರಿಸುತ್ತಿದ್ದು,

ಇದರಿಂದ ಚಿನ್ನದ ಬೆಲೆಗಳು ಸೋಮವಾರ ಕೆಳಮುಖವಾಗಿ ಒತ್ತಡದಲ್ಲಿ ವಹಿವಾಟು ನಡೆಸುತ್ತಿವೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕು) ತಪನ್ ಪಟೇಲ್ ಹೇಳಿದರು.

- Advertisement -

Related news

error: Content is protected !!