- Advertisement -
- Advertisement -

ಮಂಗಳೂರು: ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಶಾರ್ಜಾದಿಂದ ಇಂಡಿಗೋ ವಿಮಾನದ ಮೂಲಕ ಆಗಮಿಸಿದ ಕೇರಳದ ಕಾಸರಗೋಡಿನ ವ್ಯಕ್ತಿಯಿಂದ 14,69,400 ಮೌಲ್ಯದ 310.000 ಗ್ರಾಂ ತೂಕದ ಚಿನ್ನವನ್ನು ಅಧಿಕಾರಿಗಳು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಪ್ರಯಾಣಿಕರು ಧರಿಸಿದ್ದ ಚಾಕೊಲೇಟ್ ಬಣ್ಣದ ಪ್ಯಾಂಟ್ ನೊಳಗೆ ಚಿನ್ನವನ್ನು ಪುಡಿ ರೂಪದಲ್ಲಿ ಮುಚ್ಚಿಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಾಗಿದೆ.



- Advertisement -








