Sunday, April 28, 2024
spot_imgspot_img
spot_imgspot_img

ಕಲ್ಲಡ್ಕ: ಗೋಳ್ತಮಜಲು ಜೆಮ್ ಸ್ಕೂಲ್ ಅದ್ಧೂರಿ ಪ್ರಾರಂಭೋತ್ಸವ

- Advertisement -G L Acharya panikkar
- Advertisement -
vtv vitla

ಕಲ್ಲಡ್ಕ: ಗೋಳ್ತಮಜಲು ಹಜಾಜ್ ಟ್ರಸ್ಟ್ ನ ಪ್ರತಿಷ್ಟಿತ ಜೆಮ್ ಆಂಗ್ಲ ಮಾಧ್ಯಮ ಶಾಲೆಯ 2023-24 ನೇ ಸಾಲಿನ ಪ್ರಾರಂಭೋತ್ಸವವು ಸಕಲ ಸಿದ್ಧತೆಯೊಂದಿಗೆ ಅದ್ಧೂರಿಯಾಗಿ ನಡೆಯಿತು.

ಬಂಟ್ವಾಳ ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ ಅವರು ಎಲ್ ಕೆ ಜಿ ತರಗತಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಜೆಮ್ ಸ್ಕೂಲ್ ಮುಖ್ಯ ವ್ಯವಸ್ಥಾಪಕ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಸಂಚಾಲಕ ಅಹ್ಮದ್ ಮುಸ್ತಫಾ ಗೋಳ್ತಮಜಲು, ಪ್ರಾಂಶುಪಾಲ ನಿರಂಜನ್ ಉಪಸ್ಥಿತರಿದ್ದರು. ಶಾಲೆ ಹಾಗೂ ಪರಿಸರವನ್ನು ತಳಿರು ತೋರಣಗಳಿಂದ ಅಲಂಕರಿಸಿ, ಗೊಂಬೆ ಬಳಗದಿಂದ ವಿದ್ಯಾರ್ಥಿಗಳು, ಹೆತ್ತವರನ್ನು ವಿಶಿಷ್ಟವಾಗಿ ಸ್ವಾಗತಿಸಲಾಯಿತು.

- Advertisement -

Related news

error: Content is protected !!