Thursday, June 25, 2026
spot_imgspot_img
spot_imgspot_img

ರೈತರಿಗೆ ಸಿಹಿಸುದ್ದಿ ನೀಡಿದ ಮೋದಿ ಸರ್ಕಾರ

- Advertisement -
- Advertisement -

ನವದೆಹಲಿ: ಗೋಧಿ ಮತ್ತು ಸಾಸಿವೆ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನ ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ. ಗೋಧಿ 40 ರೂಪಾಯಿಯಷ್ಟು ಹೆಚ್ಚಳ ಮಾಡಿದ್ದು, ಕ್ವಿಂಟಾಲ್‌ಗೆ 2,015 ನಿಗದಿಪಡಿಸಿದೆ. ಸಾಸಿವೆ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು 400 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಕ್ವಿಂಟಲ್‌ಗೆ 5,050 ರೂಪಾಯಿ ನಿಗದಿಪಡಿಸಲಾಗಿದೆ.

ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯ ಮುಂಗಾರು ಮತ್ತು ಹಿಂಗಾರು ಅವಧಿಯ 23 ಬೆಳೆಗಳಿಗೆ ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದೆ. ಅಕ್ಟೋಬರ್‌ನಿಂದ ಹಿಂಗಾರು ಬೆಳೆ ಅವಧಿ ಆರಂಭವಾಗಲಿದ್ದು, ಗೋಧಿ ಹಾಗೂ ಸಾಸಿವೆ ಪ್ರಮುಖ ಹಿಂಗಾರು ಬೆಳೆಗಳಾಗಿವೆ.

- Advertisement -

Related news

error: Content is protected !!