Saturday, June 6, 2026
spot_imgspot_img
spot_imgspot_img

ಗೂಡ್ಸ್ ವಾಹನ ಡಿಕ್ಕಿ; 5 ವರ್ಷದ ಬಾಲಕಿ ಮೃತ್ಯು..!

- Advertisement -
- Advertisement -

ಗೂಡ್ಸ್ ವಾಹನ ಡಿಕ್ಕಿ ಹೊಡೆದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಕಲಬುರಗಿಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಫಿಲ್ಟರ್ ಬೆಡ್ ಬಳಿ ನಡೆದಿದೆ.

ಮೃತಪಟ್ಟ ಬಾಲಕಿ ಅಮ್ಮತಾ(5) ಎಂದು ಗುರುತಿಸಲಾಗಿದೆ.

ಮನೆಯ ಪಕ್ಕದ ರಸ್ತೆಯಲ್ಲಿ ಬಹಿರ್ದೆಸೆಗೆ ಹೋಗಿ ತಾಯಿ ಜೊತೆ ಮರಳಿ ಬರುತ್ತಿದ್ದಾಗ ಬಾಲಕಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದು, ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಈ ಕುರಿತು ಬಾಲಕಿ ತಾಯಿ ಭಾಗಮ್ಮಾ ಅವರು ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

- Advertisement -

Related news

error: Content is protected !!