Sunday, August 9, 2026
spot_imgspot_img
spot_imgspot_img

ನ.23ರಂದು ಗ್ರಾಮ ಪಂಚಾಯಿತ್ ಉಪಚುನಾವಣೆ

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 30 ಗ್ರಾ.ಪಂಚಾಯತ್ ಸ್ಥಾನಗಳಿಗೆ ಕಾರಣಾಂತರಗಳಿಂದ ನವೆಂಬರ್ 23ಕ್ಕೆ ಉಪಚುನಾವಣೆ ನಡೆಯಲಿದ್ದು,ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲವು ನಿಶ್ಚಿತ: ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾದ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಹೇಳಿಕೆ.ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಪಂಚ ಗ್ಯಾರಂಟಿ ಯೋಜನೆ,ಉತ್ತಮ ಶಿಕ್ಷಣ ನೀತಿ,ಅಭಿವೃದ್ಧಿ ಕಾರ್ಯಯೋಜನೆಗಳು,ಈ ಹಿಂದೆ ಕೇಂದ್ರದ ಯು.ಪಿ.ಎ ಸರಕಾರದ ಸಮಯದ ಮಹತ್ವಾಕಾಂಕ್ಷೆಯ ಯೋಜನೆಯಾದ 15 ನೇ ಹಣಕಾಸು,ಉದ್ಯೋಗ ಖಾತ್ರಿ ಯೋಜನೆ ,ಉದ್ಯೋಗ ಖಾತ್ರಿ ಯೋಜನೆ ಉದ್ಯೋಗದೊಂದಿಗೆ ಅಭಿವೃದ್ಧಿಗೆ ಪೂರಕವಾಗಿ ಗ್ರಾ.ಪಂಚಾಯತಿಗೆ ಅನುಷ್ಠಾನಗೊಳಿಸಲು ಬಾರೀ ಹಣಕಾಸು ನೀಡಿದ ವ್ಯವಸ್ಥೆ.ಈ ವ್ಯವಸ್ಥೆಯನ್ನು ಈಗಿನ ಕೇಂದ್ರ ಸರಕಾರ ಸಂಪೂರ್ಣ ಅನುದಾನ ಕಡಿತಗೊಳಿಸಿ,ನಿಯಮಗಳನ್ನು ಬಿಗಿಮಾಡಿ ಅನುಷ್ಠಾನವಾಗದಂತೆ ತಡೆಹಿಡಿಯುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯ ಆಡಳಿತಕ್ಕೆ ಬಾರೀ ತೊಂದರೆಯಾಗಿದೆ,15 ನೇ ಹಣಕಾಸು ಯೋಜನೆಯಲ್ಲೂ ಅನುದಾನ ಕಡಿತವಾಗಿದೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾದ್ಯಕ್ಷರೂ,ಜಿಲ್ಲೆಯ ಗ್ರಾ.ಪಂಚಾಯತ್ ಉಪಚುನಾವಣೆಯ ಉಸ್ತುವಾರಿ ಸಂಚಾಲಕರಾಗಿರುವ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ತಿಳಿಸಿದರು.ಈ ಬಾರಿಯ ಉಪಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರರಿಗೆ,ಪಕ್ಷದ ಕಾರ್ಯಕರ್ತ ಬಂದುಗಳಿಗೆ ಉಪಚುನಾವಣೆ ನಡೆಯುವ ಪ್ರತಿ ಗ್ರಾ.ಪಂಚಾಯತಿಗೆ ಬೇಟಿ ನೀಡಿ ಮನವರಿಕೆ ಮಾಡಿದ್ದೇವೆ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಪ್ರೋತ್ಸಾಹ ನೀಡಿ ಸಾದಕ-ಭಾದಕಗಳನ್ನು ಪರಾಮರ್ಶಿಸಿ ಗೆಲ್ಲುವ ಸಾಮಾಜಿಕ ಸ್ಥಳೀಯ ಚಿಂತನೆಯುಳ್ಳ ಪ್ರಮಾಣಿಕ ಅಭ್ಯರ್ಥಿಗಳನ್ನು ಸ್ಪರ್ದೆಗೆ ಅಣಿಗೊಳಿಸಿದ್ದೇವೆ ಎಂದು ತಿಳಿಸಿದರು.

ಗ್ರಾ.ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಯನ್ನು ಪ್ರತಿನಿಧಿಸುವ ನಮ್ಮ ನಾಯಕರಾದ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿಯವರು ಪಂಚಾಯತ್ ರಾಜ್ ವಿಚಾರಗಳನ್ನು ಪ್ರತಿ ವಿಧಾನ ಮಂಡಲ ಅದಿವೇಶನದಲ್ಲಿ ಸರಕಾರದ ಗಮನ ಸೆಳೆದು ಗ್ರಾ.ಪಂಚಾಯತ್ ಸದಸ್ಯರ ಹಾಗೂ ಸಿಬ್ಬಂದಿಗಳ ಮತ್ತು ನಾಗರೀಕರ ಆಶೋತ್ತರಗಳಿಗೆ ಉತ್ತಮ ಸ್ಪಂದನೆ ನೀಡಿರುವುದಲ್ಲದೆ,ಜಿಲ್ಲೆಯ ನಮ್ಮ ಪಕ್ಷದ ಎಲ್ಲಾ ನಾಯಕರು,ಕಾರ್ಯಕರ್ತರ ಅವಿರತ ಶ್ರಮ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಈ ಸಂದರ್ಭದಲ್ಲಿ ನೆನಪಿಸಿಕೊಂಡರು‌.ಜಿಲ್ಲೆಯ 30 ಗ್ರಾ.ಪಂಚಾಯತಿಗೆ ವಿವಿಧ ಕಾರಣಗಳಿಂದ ತೆರವಾದ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದ್ದು,ಆಯಾ ವಾರ್ಡಿನ ಪ್ರಜ್ಞಾವಂತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವಂತೆ ವಿಜ್ಞಾಪಿಸಿದರು.

- Advertisement -

Related news

error: Content is protected !!