Monday, May 6, 2024
spot_imgspot_img
spot_imgspot_img

ಪುತ್ತೂರು ಮತ್ತು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಸ್ವಾತಂತ್ರೋತ್ಸವ ನಡಿಗೆಯ ಸಮಾರೋಪ ಸಮಾರಂಭ

- Advertisement -G L Acharya panikkar
- Advertisement -

ವಿಟ್ಲ: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಾತ್ಮಾ ಗಾಂಧೀಜಿಯವರ ಅಹಿಂಸೆ, ಸಮಾನತೆ, ಜಾತ್ಯಾತೀತತೆ, ಸ್ವದೇಶಿ ಸಿದ್ಧಾಂತಗಳೇ ಪ್ರಮುಖ ಪಾತ್ರ ವಹಿಸಿದೆ ಎಂದು ಕೆ.ಪಿ.ಸಿ.ಸಿ. ಕಾರ್ಯದರ್ಶಿ ನಿಖಿತ್ ರಾಜ್ ಮೌರ್ಯ ಹೇಳಿದರು.

ಪುತ್ತೂರು ಮತ್ತು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಮೃತ ಮಹೋತ್ಸವದ ಪ್ರಯುಕ್ತ ಪುತ್ತೂರು – ದರ್ಬೆಯಿಂದ ವಿಟ್ಲದ ತನಕ ನಡೆದ ಸ್ವಾತಂತ್ರೋತ್ಸವ ನಡಿಗೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಮಹಾತ್ಮಾಗಾಂಧೀಜಿ ಹಾಗೂ ಪತ್ನಿಯ ಅನಾರೋಗ್ಯವನ್ನು ಲೆಕ್ಕಿಸದೆ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಪಂಡಿತ್ ಜವಾಹರಲಾಲ್ ನೆಹರು ಅವರು ದೇಶದ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟವನ್ನು ಇಂದು ಪ್ರಶ್ನಿಸುವ ಮಟ್ಟಕ್ಕೆ ಬಂದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಸುಳ್ಳು ಕತೆಗಳು ಎಂದಿಗೂ ಇತಿಹಾಸವಾಗಲು ಸಾಧ್ಯವಿಲ್ಲ. ಸತ್ಯ ಗ್ರಂಥಾಲಯಗಳಲ್ಲಿ ಇದೆ ಹೊರತು ವಾಟ್ಸಾಪ್ ಯುನಿವರ್ಸಿಟಿ ಯಲ್ಲಿ ಅಲ್ಲ ಎಂದ ಅವರು ಹೇಳಿದರು. ಮಾಜಿ ಸಚಿವ ಬಿ.ರಮಾನಾಥ ರೈ, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿದರು.

ಪುತ್ತೂರು ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ. ಸ್ವಾಗತಿಸಿದರು. ದ.ಕ.ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿ’ಸೋಜ ವಂದೇ ಮಾತರಂ ಮತ್ತು ರಾಷ್ಟ್ರಗೀತೆ ನಡೆಸಿಕೊಟ್ಟರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ್ ಉಪಸ್ಥಿತರಿದ್ದರು.

ಪಕ್ಷ ಪ್ರಮುಖರಾದ ಹೇಮನಾಥ ಶೆಟ್ಟಿ, ಎಂ.ಎಸ್.ಮುಹಮ್ಮದ್, ವೆಂಕಪ್ಪ ಗೌಡ ಸುಳ್ಯ, ಸುಭಾಶ್ಚಂದ್ರ ಶೆಟ್ಟಿ ಕೊಳ್ಳಾಡು, ಅನಿತಾ ಹೇಮನಾಥ ಶೆಟ್ಟಿ, ಕೃಪಾ ಅಮರ್ ಆಳ್ವ, ದಿವ್ಯಪ್ರಭಾ ಗೌಡ, ಮಲ್ಲಿಕಾ ಪಕ್ಕಳ, ಮುಹಮ್ಮದ್ ಅಲಿ ಪುತ್ತೂರು, ಪ್ರವೀಣ್ ಚಂದ್ರ ಆಳ್ವ, ಉಮಾನಾಥ ಶೆಟ್ಟಿ, ಮುರಳೀಧರ ರೈ ಮಠಂದಬೆಟ್ಟು, ಸೋಮಶೇಖರ್ ಶೆಟ್ಟಿ ಅಳಕೆಮಜಲು, ನ್ಯಾಯವಾದಿಗಳಾದ ಎಂ.ಪಿ. ಅಬೂಬಕ್ಕರ್, ನೂರುದ್ದೀನ್ ಸಾಲ್ಮರ ಮತ್ತು ಪದ್ಮನಾಭ ಪೂಜಾರಿ ಅಳಿಕೆ, ಪ್ರಸಾದ್ ಪಾಣಾಜೆ, ರವಿ ಪ್ರಸಾದ್ ಶೆಟ್ಟಿ, ಅನ್ವರ್ ಖಾಸಿಂ, ಹನೀಫ್ ಪುಂಚತ್ತಾರು, ಅಶೋಕ್ ಶೆಟ್ಟಿ, ಅಶ್ರಫ್ ಬಸ್ತಿಕಾ‌, ನಝೀರ್ ಮಠ, ಪ್ರಸಾದ್ ಕೌಸಲ್ ಶೆಟ್ಟಿ, ಶ್ರೀರಾಮ ಪಕ್ಕಳ, ಸಾರದಾ ಅರಸ್, ಸಾಯಿರಾ ಝುಬೈರ್, ಅಬ್ದುರಹ್ಮಾನ್ ಯುನಿಕ್, ಕೆ.ಪದ್ಮನಾಭ ರೈ, ಜಿ.ಎ. ಸಂಶುದ್ದೀನ್ ಅಜ್ಜಿನಡ್ಕ, ಹನೀಫ್ ಬಗ್ಗುಮೂಲೆ, ನಾಸಿರ್ ಕೋಲ್ಪೆ, ಬಾತಿಶ್ ಅಳಕೆಮಜಲು, ಉಮ್ಮರ್ ಸುಲ್ತಾನ್ ನಗರ, ಕರೀಂ ಕುದ್ದುಪದವು, ಮೋಹನ್ ಗುರ್ಜಿನಡ್ಕ, ರಾಮಣ್ಣ ಪಿಲಿಂಜ, ಹಸೈನಾರ್ ನೆಲ್ಲಿಗುಡ್ಡೆ, ವಿ.ಕೆ.ಎಂ.ಅಶ್ರಫ್ ವಿಟ್ಲ, ಶ್ರೀನಿವಾಸ ಶೆಟ್ಟಿ ಕೊಲ್ಯ, ಸೇವಾದಳ ಜಿಲ್ಲಾ ಪ್ರಮುಖರಾದ ಸಿದ್ದೀಕ್ ಸುಲ್ತಾನ್, ಸಂತೋಷ್ ಭಂಡಾರಿ, ಜೋಸ್ ಗೋಳಿತೊಟ್ಟು ಮೊದಲಾದವರು ಭಾಗವಹಿಸಿದರು.

ರಮಾನಾಥ ವಿಟ್ಲ ವಂದಿಸಿದರು. ಮುಹಮ್ಮದ್ ಬಡಗನ್ನೂರು ನಿರೂಪಿಸಿದರು.

- Advertisement -

Related news

error: Content is protected !!