Wednesday, July 22, 2026
spot_imgspot_img
spot_imgspot_img

ಹಾರ್ಮುಜ್‌ ದಾಟಲು ಗ್ರೀನ್‌ ಸಿಗ್ನಲ್‌ – ಭಾರತಕ್ಕೆ LPG ಟ್ಯಾಂಕರ್‌, ಪೈನ್‌ ಗ್ಯಾಸ್‌ ಹೊತ್ತ ಎರಡು ಹಡಗುಗಳ ಆಗಮನ

- Advertisement -
- Advertisement -

ಟೆಹ್ರಾನ್‌: ಹಾರ್ಮುಜ್‌ ಜಲಸಂಧಿಯಲ್ಲಿ ಕ್ಲಿಯರೆನ್ಸ್‌ ಪಡೆದ ಬಳಿಕ ಭಾರತೀಯ ಎಲ್‌ಪಿಜಿ ಟ್ಯಾಂಕರ್‌ ಹೊತ್ತ ʻಜಗ್‌ ವಸಂತ್‌ʼ ಹಡಗು ಮತ್ತು ಪೈನ್‌ ಗ್ಯಾಸ್‌ ಹೊತ್ತ ಹಡಗು ಸುರಕ್ಷಿತವಾಗಿ ಭಾರತ ತಲುಪಿದ್ದು, ಇನ್ನೂ ಎರಡು ಹಡಗು ಮಾರ್ಗಮಧ್ಯದಲ್ಲಿದ್ದು, ಸುಮಾರು 20 ಹಡಗುಗಳು ಅನುಮತಿಗಾಗಿ ಕಾಯುತ್ತಾ ಹಾರ್ಮುಜ್‌ ಜಲಸಂಧಿಯಲ್ಲೇ ಸಿಲುಕಿಕೊಂಡಿವೆ.

ಲಿಕ್ವಿಡ್‌ ಪೆಟ್ರೋಲಿಯಂ ಗ್ಯಾಸ್‌ ಸಾಗಿಸುತ್ತಿದ್ದ ಭಾರತದ ಧ್ವಜ ಹೊತ್ತ ಎರಡು ಟ್ಯಾಂಕರ್‌ಗಳು ಸುರಕ್ಷಿತವಾಗಿ ಇರಾನ್‌ನ ಹಾರ್ಮುಜ್‌ ಜಲಸಂಧಿ ದಾಟಿ ಭಾರತಕ್ಕೆ ಬಂದಿವೆ. ಇರಾನ್‌ ಅಧಿಕಾರಿಗಳು ಗೊತ್ತುಪಡಿಸಿದ ಮಾರ್ಗಗಳನ್ನೇ ಅನುಸರಿಸಿ 2 ಹಡಗು ಸುರಕ್ಷಿತವಾಗಿ ಪ್ರಯಾಣ ಬೆಳೆಸಿವೆ. ಜಗ್ ವಸಂತ್‌ನಲ್ಲಿದ್ದ 14 ಸಿಬ್ಬಂದಿ ಕೂಡ ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಜಗ್‌ ವಸಂತ್‌ ಶುಕ್ರವಾರ (ಮಾ.27) ರಾತ್ರಿ 8 ಗಂಟೆ ಸುಮಾರಿಗೆ ದೀನದಯಾಳ್‌ ಬಂದರು ಪ್ರಾಧಿಕಾರದ ಟರ್ಮಿನಲ್‌ ವಡಿನಾರ್‌ನಲ್ಲಿ ಲಂಗರು ಹಾಕಿತು. 230 ಮೀಟರ್‌ ಉದ್ದದ ಬೃಹತ್‌ ಹಡಗು 47,000 ಟನ್‌ ಎಲ್‌ಪಿಜಿ ಸಾಗಿಸುತ್ತಿತ್ತು. ಇದರ ಸರಕನ್ನು ಹೆಚ್ಚಿನ ಸಾಗಣೆಗಾಗಿ ಮತ್ತೊಂದು ಹಡಗಿಗೆ ವರ್ಗಾಯಿಸಲಾಗಿದೆ.

ಪೈನ್‌ ಗ್ಯಾಸ್‌ ಟ್ಯಾಂಕರ್‌ ಹೊತ್ತ 2ನೇ ಹಡಗು ಸಹ ಶುಕ್ರವಾರ ರಾತ್ರಿಯೇ ಭಾರತದ ಗಡಿ ತಲುಪಿದ್ದು, ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಿಂದ ಬಾಡಿಗೆಗೆ ಪಡೆಯಲಾದ ಈ ಹಡಗು ಏ. 2 ರಂದು ಒಡಿಶಾದ ಧಮ್ರಾ ಬಂದರನ್ನು ಪ್ರವೇಶಿಸುವ ನಿರೀಕ್ಷೆಯಿದೆ.

ಕಡಲ ಸಂರಕ್ಷಣಾ ಪಡೆಗಳ ಮಾಹಿತಿ ಪ್ರಕಾರ, ಭಾರತೀಯ ಧ್ವಜ ಹೊಂದಿರುವ ಇತರ 3 LPG ಹಡಗುಗಳಾದ ಜಗ್ ವಿಕ್ರಮ್, ಗ್ರೀನ್ ಆಶಾ ಮತ್ತು ಗ್ರೀನ್ ಸಾನ್ವಿ – ಮಿನಾ ಸಕ್ರ್ ಬಳಿ ಲಂಗರು ಹಾಕಿವೆ. ಜಲಸಂಧಿಯ ಮೂಲಕ ಹಾದುಹೋಗಲು ಭಾರತೀಯ ನೌಕಾಪಡೆಯಿಂದ ಸೂಚನೆಗಳಿಗಾಗಿ ಕಾಯುತ್ತಿವೆ ಎಂದು ತಿಳಿದುಬಂದಿದೆ. ಕಳೆದ ಫೆ.28 ಎಂದು ಇರಾನ್‌ ಯುದ್ಧ ಪ್ರಾರಂಭವಾದಾಗಿನಿಂದ ಈವರೆಗೆ 4 LPG ಮತ್ತು 2 ಕಚ್ಚಾ ತೈಲ ಟ್ಯಾಂಕರ್‌ಗಳು ಹಾರ್ಮುಜ್‌ ಜಲಸಂಧಿ ದಾಟಿ ಭಾರತ ಪ್ರವೇಶಿಸಿವೆ. ಇನ್ನೂ ಸುಮಾರು 18 ರಿಂದ 20 ಭಾರತೀಯ ಹಡಗುಗಳು ಕೊಲ್ಲಿಯಲ್ಲಿ ಸಿಲುಕಿಕೊಂಡಿದ್ದುಇದರಲ್ಲಿ 677 ಕ್ಕೂ ಹೆಚ್ಚು ಭಾರತೀಯ ಸಿಬ್ಬಂದಿ ಇದ್ದಾರೆ ಎಂದು ಮೂಲಗಳು ತಿಳಿಸಿವೆ

- Advertisement -

Related news

error: Content is protected !!