Tuesday, April 16, 2024
spot_imgspot_img
spot_imgspot_img

ಕನಸುಗಳು-2020 ಕಾರ್ಯಕ್ರಮದ ಸಮಾರೋಪ-ಆನ್‌ಲೈನ್ ಸ್ಫರ್ಧೆಗಳಲ್ಲಿ ವಿದ್ಯಾರ್ಥಿಗಳ ಉತ್ಸಾಹಭರಿತ ಪಾಲ್ಗೊಳ್ಳುವಿಕೆ

- Advertisement -G L Acharya panikkar
- Advertisement -

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗಾಗಿ ಕನಸುಗಳು-2020 ಕಾರ್ಯಕ್ರಮದ ಪ್ರಯುಕ್ತ ವಿವಿಧ ರೀತಿಯ ಆನ್‌ಲೈನ್ ಸ್ಫರ್ಧೆಗಳು ಯಶಸ್ವಿಯಾಗಿ ಮುಕ್ತಾಯಗೊಂಡಿತು. ರಾಜ್ಯದ ವಿವಿಧ ಜಿಲ್ಲೆಯ ಸುಮಾರು 722 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಕೊರೋನಾದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳನ್ನು ಇಂತಹ ಪೂರಕ ಕೆಲಸಗಳಲ್ಲಿ ತೊಡಗಿಸಿಕೊಂಡು ಅವರ ಸುಂದರ ಬದುಕಿಗೆ ಭದ್ರ ಬುನಾದಿಯನ್ನು ಕಲ್ಪಿಸಿಕೊಡುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿತ್ತು.

ವಿಜ್ಞಾನ ಸ್ತಬ್ಧ ಮಾದರಿ ರಚನೆ, ಯುವ ವೈದ್ಯರು, ಕನ್ನಡ ಯುವ ಪತ್ರಕರ್ತ, ತುಳು ಒಗಟುವಿಗೆ ಉತ್ತರ, ಮೇಧಾವಿ, ಜನರಲ್ ಕ್ವಿಜ್, ಚರ್ಚಾ ಸ್ಫರ್ಧೆ, ಪ್ರಾಕೃತಿಕ ರಂಗೋಲಿ, ವರ್ಣ ಚಿತ್ರ ರಚನೆ, ಪೆನ್ಸಿಲ್ ಆರ್ಟ್ , ಶಾಸ್ತ್ರೀಯ ಸಂಗೀತ ಗಾಯನ, ಯಕ್ಷಗಾನ ಭಾಗವತಿಕೆ ಸ್ಫರ್ಧೆ, ಯಕ್ಷಗಾನ ಅರ್ಥಗಾರಿಕೆ ಸ್ಫರ್ಧೆ, ಕನ್ನಡ ಕವನ ರಚನೆ, ಜನಪದ ಗಾಯನ ರಚನೆ ಹೀಗೆ ಒಟ್ಟು 15 ವಿವಿಧ ರೀತಿಯ ಸ್ಫರ್ಧೆಗಳನ್ನು ವಿದ್ಯಾರ್ಥಿಗಳಿಗಾಗಿ ನಿಯೋಜಿಸಲಾಗಿತ್ತು.

ಕಾರ್ಯಕ್ರಮದ ಸಂಯೋಜಕ ಹರೀಶ ಶಾಸ್ತ್ರೀ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತ ,ಲಾಕ್ ಡೌನ್ ಸಮಯದಲ್ಲಿ ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದ ವಿದ್ಯಾರ್ಥಿಗಳ ಮನಸ್ಸಿಗೆ ಚೈತನ್ಯ ನೀಡುವ ಉದ್ದೇಶದಿಂದ ಈ ಆನ್ ಲೈನ್ ಚಟುವಟಿಕೆಗಳನ್ನು ನಡೆಸಿದೆವು. ಇಲ್ಲಿ ಸ್ಪರ್ಧೆಯಿದ್ದರೂ ಅದಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳು ಬಹುಮಾನವನ್ನು ಲೆಕ್ಕಿಸದೆ ಉತ್ಸುಕತೆಯಿಂದ ಪಾಲ್ಗೊಂಡದ್ದು ವಿಶೇಷ.

ಕೊರೋನಾ ಪ್ರಭಾವದಿಂದ ಜಗತ್ತು ಜಡವಾಗಿದ್ದರೂ ನಾವು ಕಾರ್ಯಶೀಲರಾಗಿದ್ದೇವೆ, ಮುಂದಿನ ದಿನಗಳನ್ನು ಎದುರುಸಲು ಸಜ್ಜಾಗಿದ್ದೇವೆ ಎನ್ನುವಂತಿತ್ತು ಮಕ್ಕಳ ಅಸಕ್ತಿ. ಪ್ರಸಕ್ತ ಸಂದರ್ಭದ ಬಗ್ಗೆ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ಸೂಚಿಸುತ್ತಿರುವಾಗ ಮಕ್ಕಳಿಗೂ ಚರ್ಚಾ ಸ್ಪರ್ಧೆ, ಮನೆ ಮದ್ದುಗಳ ಪರಿಚಯ ಮುಂತಾದ ಸ್ಪರ್ಧೆಗಳ ನ್ನು ಆಯೋಜಿಸಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವೇದಿಕೆಯ ಮೂಲಕ ಮಾತನಾಡುವ ಅವಕಾಶ ನೀಡಿದ ಸಂತೋಷ ಮತ್ತು ಅದನ್ನು ವಿದ್ಯಾರ್ಥಿಗಳು ಅದ್ಭುತ ರೀತಿಯಲ್ಲಿ ಸದುಪಯೋಗಪಡಿಸಿಕೊಂಡಿದ್ದಾರೆ ಎಂಬ ತೃಪ್ತಿ ನಮಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಮಾತನಾಡಿ ಸಾಮಾನ್ಯವಾಗಿ ಈ ಸಮಯದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಿ ವಿದ್ಯಾರ್ಥಿಗಳು ವಿವಿಧ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಸಮಯ. ಆದರೆ ಈ ಸಲ ಸುದೀರ್ಘ ಸಮಯ ಶಾಲೆಯಿಂದ ದೂರ ಉಳಿದ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿಸುವ ಉದ್ದೇಶದಿಂದ ಮಾಡಿದ ‘ಕನಸುಗಳು-2020’ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿರುವುದು ನಿಜಕ್ಕೂ ಸಂತಸ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಇ-ಸರ್ಟಿಫಿಕೇಟ್ ನ್ನು ನೀಡಲಾಯಿತು, ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಅಂಚೆಯ ಮೂಲಕ ಮನೆಬಾಗಿಲಿಗೆ ತಲುಪಿಸುವ ಪ್ರಯತ್ನವನ್ನು ಮಾಡಲಾಯಿತು. ಈ ಮೂಲಕ ವಿದ್ಯಾರ್ಥಿಯ ಕನಸುಗಳ ಸಾಕ್ಷಾತ್ಕಾರಕ್ಕಾಗಿ ನೈತಿಕ ಮೌಲ್ಯಗಳನ್ನು ತುಂಬುವ ಕೆಲಸ ಮತ್ತು ಅವಕಾಶಗಳು ಎಲ್ಲಿ ಇದೆ ಎಂದು ಅರಿತು ಅದರ ಸದುಪಯೋಗದೊಂದಿಗೆ ಅಲ್ಲಿ ಬದುಕು ಕಟ್ಟಿಕೊಳ್ಳುವ ಅವಕಾಶವನ್ನು ವಿವೇಕಾನಂದ ಪದವಿಪೂರ್ವ ಕಾಲೇಜು ಕನಸುಗಳು-2020 ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡುವ ಕೆಲಸವನ್ನು ಮಾಡಿತು.

- Advertisement -

Related news

error: Content is protected !!