Monday, June 15, 2026
spot_imgspot_img
spot_imgspot_img

ಗುಂಡ್ಯ ಸಮೀಪ ಸಿಮೆಂಟ್ ಸಾಗಾಟದ ಲಾರಿಯಲ್ಲಿ ಕಾಣಿಸಿಕೊಂಡ ಬೆಂಕಿ.

- Advertisement -
- Advertisement -

ಲಾರಿ ಚಾಲಕ, ಕ್ಲೀನರ್ ಅಪಾಯದಿಂದ ಪಾರು.

ನೆಲ್ಯಾಡಿ: ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ಸಮೀಪದ ಗಡಿಯಲ್ಲಿ ಸಿಮೆಂಟ್ ಸಾಗಾಟದ ಲಾರಿಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಾರಿ ಭಾಗಶ: ಸುಟ್ಟುಹೋಗಿರುವ ಘಟನೆ ಸೋಮವಾರ ( ಆಗಸ್ಟ್.17)ದಂದು ಬೆಳಿಗ್ಗೆ ನಡೆದಿದೆ.

 

ರಾಷ್ಟ್ರೀಯ ಹೆದ್ದಾರಿ 75ರಲ್ಲಿ   ಬೆಂಗಳೂರಿನಿಂದ ಮಂಗಳೂರು ಕಡೆಗೆ ಸಿಮೆಂಟ್ ಸಾಗಾಟ ಮಾಡುತ್ತಿದ್ದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಬೆಂಕಿ ತಗುಲಿರುವುದು ಗಮನಕ್ಕೆ ಬಂದ ಕೂಡಲೇ  ಚಾಲಕ ಲಾರಿ ನಿಲ್ಲಿಸಿದ್ದು, ಅಗ್ನಿಶಾಮಕ ಸಿಬ್ಬಂದಿಗಳು,ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಲಾಗಿದೆ.

ಬೆಂಕಿಯಿಂದಾಗಿ ಲಾರಿಯ ಟಯರ್ ಸುಟ್ಟುಹೋಗಿದ್ದು ಹೆಚ್ಚಿನ ಅನಾಹುತ ನಡೆದಿಲ್ಲ . ಲಾರಿ ಚಾಲಕ, ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.

- Advertisement -

Related news

error: Content is protected !!