Monday, May 6, 2024
spot_imgspot_img
spot_imgspot_img

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ.! ಎಸ್ ಎಲ್ ಭೈರಪ್ಪ ಅವರ ಆವರಣ ಕಾದಂಬರಿಯಲ್ಲಿ ಈ ಮುಂಚೆಯೇ ಉಲ್ಲೇಖ!

- Advertisement -G L Acharya panikkar
- Advertisement -

ಜ್ಞಾನವಾಪಿ ಮಸೀದಿ ವಿವಾದ ಭುಗಿಲೆದ್ದಿದೆ. ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ವರದಿಯಾಗಿದೆ. ಇದೇ ಸಂದರ್ಭದಲ್ಲಿ ಹೆಸರಾಂತ ಕಾದಂಬರಿಕಾರ ಎಸ್.ಎಲ್ ಭೈರಪ್ಪ ಅವರ ಪ್ರಸಿದ್ಧ ಆವರಣ ಕಾದಂಬರಿಯಲ್ಲಿ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಇದೆ ಎಂದು ಉಲ್ಲೇಖಿಸಿರುವ ಸಂಗತಿ ಸಂಚಲನ ಮೂಡಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಾರಣಾಸಿಯ ಸಿವಿಲ್ ನ್ಯಾಯಾಲಯವು ಜ್ಞಾನವಾಪಿ ಮಸೀದಿಯಲ್ಲಿ “ದೊಡ್ಡ ಶಿವಲಿಂಗ” ಪತ್ತೆಯಾದ ನಂತರ ‘ವಾಝುಖಾನಾ’ವನ್ನು ಸೀಲ್ ಮಾಡಲು ಆದೇಶಿಸಿದೆ ಎಂದು ಮಂಗಳವಾರ ಹಿಂದೂ ಪರವಾಗಿ ಪ್ರತಿನಿಧಿಸುವ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.

ವಾರಣಾಸಿ ನ್ಯಾಯಾಲಯವು ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಸರ್ವೆ ಆದೇಶವನ್ನು ಪ್ರಶ್ನಿಸಿ ಮಸೀದಿ ಸಮಿತಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ವಾರಣಾಸಿ ನ್ಯಾಯಾಲಯವು ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಒಂದು ಸ್ಥಳವನ್ನು ಸೀಲಿಂಗ್ ಮಾಡಲು ನಿರ್ದೇಶಿಸಿದೆ. ಸಮೀಕ್ಷೆಯ ಸಮಯದಲ್ಲಿ ನ್ಯಾಯಾಲಯವು ನೇಮಿಸಿದ ಅಡ್ವೊಕೇಟ್ ಕಮಿಷನರ್ ಆವರಣದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ತಿಳಿಸಲಾಯಿತು.

ಕೆಲವು ಹಿಂದೂ ಭಕ್ತರ ಮನವಿಯ ಮೇರೆಗೆ ವಾರಣಾಸಿ ನ್ಯಾಯಾಲಯವು ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಸಮೀಕ್ಷೆಯನ್ನು ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಆಡಳಿತ ಸಮಿತಿಯು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ. ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಅರ್ಜಿಯ ವಿಚಾರಣೆ ನಡೆಸುತ್ತಿದೆ.

“ನಿನ್ನೆ ಸಮೀಕ್ಷೆಯ ಸಮಯದಲ್ಲಿ, ವಜುಖಾನಾದ ಮಧ್ಯದಲ್ಲಿ ನಾವು ಬಾವಿಯಂತಹ ರಚನೆಯನ್ನು ಕಂಡುಕೊಂಡಿದ್ದೇವೆ. ವಜುಖಾನದಲ್ಲಿ ನೀರಿನ ಮಟ್ಟ ತಗ್ಗಿಸುವಂತೆ ಆಯುಕ್ತರಿಗೆ ಮನವಿ ಮಾಡಿದ್ದೇವೆ. ನೀರು ಕಡಿಮೆಯಾದಾಗ, ನಾವು ಬಾವಿಯಂತಹ ರಚನೆಯಲ್ಲಿ ದೊಡ್ಡ ಶಿವಲಿಂಗವನ್ನು ನೋಡಿದ್ದೇವೆ. ಶಿವಲಿಂಗವು ಸುಮಾರು 4 ಮೀಟರ್ ವ್ಯಾಸವನ್ನು ಹೊಂದಿದೆ ಮತ್ತು ಸುಮಾರು 3 ಅಡಿ ಎತ್ತರವನ್ನು ಹೊಂದಿದೆ. ಇದು ನೆಲದೊಳಗೆ ಆಳವಾಗಿದೆ ಎಂದು ನಾನು ನಂಬುತ್ತೇನೆ ಎಂದು ವಕೀಲ ವಿಷ್ಣು ಶಂಕರ್ ಜೈನ್ ತಿಳಿಸಿದ್ದಾರೆ.

- Advertisement -

Related news

error: Content is protected !!