Friday, March 29, 2024
spot_imgspot_img
spot_imgspot_img

42 ಕೋಟಿ ಬಡವರ ಖಾತೆಯಿಂದ ತಲಾ ₹2 ಎಗರಿಸಿದ್ದಾನೆ ಈ ಚಾಲಾಕಿ ಹ್ಯಾಕರ್ ಶ್ರೀಕಿ..!

- Advertisement -G L Acharya panikkar
- Advertisement -

ಬಿಟ್ ಕಾಯಿನ್ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಶ್ರೀಮಂತರ ಖಾತೆಗೆ ಕನ್ನ ಹಾಕಿದ್ದೂ ಮಾತ್ರವಲ್ಲದೇ 43 ಕೋಟಿ ಕಡುಬಡವರ ಹಣವನ್ನೂ ಕಿತ್ತುಕೊಂಡಿದ್ದಾನೆ ಎಂಬ ಆರೋಪ ಬೆಳಕಿಗೆ ಬಂದಿದೆ.

ಈ ಸಂಬ0ಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದು ಬಂದಿದೆಯ0ತೆ. ನೇರವಾಗಿ ಬಡವರ ಖಾತೆಗೆ ಕೈಹಾಕಿ ಪ್ರತಿ ತಿಂಗಳು ನೂರಾರು ಕೋಟಿ ಹಣ ಲೂಟಿ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಿಟ್ ಕಾಯಿನ್ ಹಗರಣ ಶ್ರೀಮಂತರ ದುಡ್ಡು ಆದರೆ, ಈ ಪ್ರಕರಣದಲ್ಲಿ ಕಡುಬಡವರ ದುಡ್ಡನ್ನು ಗುಳಂ ಮಾಡಿದ್ದಾನೆ. ಕೇಂದ್ರ ಸರ್ಕಾರ ಕಡುಬಡವರ ಜೀವನಕ್ಕಾಗಿ ಜನ್‌ಧನ್ ಯೋಜನೆಯನ್ನ ಜಾರಿಗೆ ತಂದಿದೆ. ಜನರ ಜನ್‌ಧನ್ ಖಾತೆಗೆ ಕೇಂದ್ರ ಸರ್ಕಾರ ಜಮೆ ಮಾಡುತ್ತಿದ್ದ ಸಹಾಯಧನದ ಹಣಕ್ಕೇ ಶ್ರೀಕಿ ಕನ್ನ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಸುಮಾರು 43 ಕೋಟಿ ಜನ್‌ಧನ್ ಅಕೌಂಟ್ ಹ್ಯಾಕ್ ಮಾಡಿ, ಪ್ರತಿ ತಿಂಗಳು ಎರಡೆರಡೇ ರುಪಾಯಿ ಎತ್ತುತ್ತಿದ್ದ ಅನ್ನುವ ಆರೋಪ ಕೇಳಿಬಂದಿದೆ.

- Advertisement -

Related news

error: Content is protected !!