Saturday, April 20, 2024
spot_imgspot_img
spot_imgspot_img

‘ಹವ್ಯಾಸಿ ಅಪರಾಧಿ’ ಹ್ಯಾಕರ್ ಶ್ರೀಕಿಯ ಆಸೆಗೆ ತಣ್ಣೀರೆರೆಚಿದ ಕೋರ್ಟ್.

- Advertisement -G L Acharya panikkar
- Advertisement -

ಬೆಂಗಳೂರು: ಡಾರ್ಕ್​ ವೆಬ್​ ಪ್ರಕರಣದ ಪ್ರಮುಖ ಆರೋಪಿ ಹ್ಯಾಕರ್​ ಶ್ರೀಕಾಂತ್​ ಅಲಿಯಾಸ್​ ಶ್ರೀಕಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿ 33ನೇ ಸಿಸಿಹೆಚ್​ಎನ್​ಡಿಪಿಎಸ್​ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಹೊಸವರ್ಷದ ದಿನವಾದ ಬೇಲ್​ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಆರೋಪಿಗೆ ಕೋರ್ಟ್​ ನಿರಾಶೆ ಮೂಡಿಸಿದೆ. ಈವರೆಗೆ ಡಾರ್ಕ್​ವೆಬ್​ ಪ್ರಕರಣದ ಇತರೆ ಎಲ್ಲಾ ಆರೋಪಿಗಳಿಗೂ ಜಾಮೀನು ನೀಡಲಾಗಿದೆ, ಆದರೆ ಪ್ರಕರಣದ ಎ10 ಶ್ರೀಕಿಗೆ ಜಾಮೀನು ಅರ್ಜಿ ನಿರಾಕರಣೆ ಮಾಡಲಾಗಿದೆ. ಈ ನಿರಾಕರಣೆಗೆ ಕೋರ್ಟ್​ ಕೆಲವು ಕಾರಣಗಳನ್ನೂ ನೀಡಿದೆ.

ಮೊದಲಿಗೆ ಶ್ರೀಕಿ ಪರವಾಗಿ ವಾದ ಮಾಡಿದ ವಕೀಲರು ಅವರು ನಾನ್​ ಬೇಲೆಬಲ್​ ಅಫೆನ್ಸ್​ನಲ್ಲಿ ಭಾಗಿಯಾಗಿಲ್ಲ ಆದ್ದರಿಂದ ಅವರಿಗೆ ಜಾಮೀನು ನೀಡಬೇಕೆಂದುವಾದಿಸಿದರು.

ಆದರೆ ಸರ್ಕಾರದ ಪರ ವಕೀಲರು ಪ್ರೈಮಾಫೆಸಿ ಬಗ್ಗೆ ವಿವರಿಸಿದರು, ಆತ ನಾನ್​ ಬೇಲೆಬಲ್​ ಆಫೇನ್ಸ್​ನಲ್ಲಿ ಭಾಗಿಯಾಗಿದ್ದಾನೆಂದು ವಾದಿಸಿದರು. 4/11/2020 ರಂದು ವಿದೇಶದಿಂದ ಡ್ರಗ್​ ಬರುವ ಮಾಹಿತಿ ಸಿಕ್ಕಿತ್ತು, ಅರವ್​ಗೌಡ ಎಂಬ ವ್ಯಕ್ತಿಯ ಹೆಸರಿನಲ್ಲಿ ಪಾರ್ಸೆಲ್​ ಬರ್ತಾ ಇತ್ತು. ಅದರಲ್ಲಿ ಹೈಡ್ರೋ ಗಾಂಜಾ ಚಾಮರಾಜಪೇಟೆ ಪೋಸ್ಟ್​ ಆಫೀಸ್​ಗೆ ಬರ್ತಾ ಇತ್ತು.
ಅದನ್ನ ಸುಜಯ್​ ಮತ್ತು ಹೇಮಂತ್​ ರಿಸಿವ್ ಮಾಡೋಕೆ ಬಂದಿದ್ದರು, ಅವರಿಬ್ಬರೂ ಆರೋಪಿ ಶ್ರೀಕಿಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಅಲ್ಲದೇ ಈತನೊಬ್ಬ ಹವ್ಯಾಸಿ ಅಪರಾಧ ಕೃತ್ಯವೆಸಗುವವನಾಗಿದ್ದಾನೆ, ಈತನ ವಿರುದ್ದ ಅನೇಕ ಐಪಿಸಿ ಸೆಕ್ಷನ್​ ಅಡಿಯಲ್ಲಿ ಕೇಸ್​ ಗಳಿವೆ. ಈತನಿಗೆ ಜಾಮೀನು ನೀಡಿದ್ರೆ ಸಾಕ್ಷಿ ನಾಶ ಮಾಡುವ ಸಾಧ್ಯತೆಗಳಿವೆ, ಕಾರಣ ಈತ ಒಬ್ಬ ಇಂಟರ್​ ನ್ಯಾಷನಲ್​ ಹ್ಯಾಕರ್​. ಹಲವಾರು ಹ್ಯಾಕಿಂಗ್ ಕೃತ್ಯಗಳನ್ನೆಸಗಿದ್ದಾನೆ, ಅಲ್ಲದೇ ಈತ ಇಡೀ ಸಮಾಜಕ್ಕೆ ಮಾದಕವಸ್ತು ಸಪ್ಲೇ ಮಾಡುವ ಸಾಧ್ಯತೆ ಇದೆ.
ಇದೊಂದು ಗಂಭೀರ ಪ್ರಕರಣ ಇನ್ನೂ ತನಿಖಾ ಹಂತದಲ್ಲಿಯೇ ಇದೆ, ಈತ ಇನ್ನೂ ಅನೇಕ ಮಂದಿಯ ಜೊತೆ ಸೇರಿ ಈ ಕೃತ್ಯವಸಗಿರುವ ಶಂಕೆ ಇದೆ ಎಂದು ವಾದಿಸಿದರು.

ವಕೀಲರ ಈ ವಾದವನ್ನು ಪುರಸ್ಕರಿಸಿದ ನ್ಯಾಯ ಪೀಠ ಶ್ರೀಕಿಯ ಜಾಮೀನು ಅರ್ಜಿಯನ್ನು  ವಜಾಗೊಳಿಸಿ ಆದೇಶ ಹೊರಡಿಸಿದೆ.

- Advertisement -

Related news

error: Content is protected !!