Tuesday, May 7, 2024
spot_imgspot_img
spot_imgspot_img

ಬೆಳ್ತಂಗಡಿ : ಕ್ಷುಲ್ಲಕ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ: ದೂರು, ಪ್ರತಿದೂರು ದಾಖಲು

- Advertisement -G L Acharya panikkar
- Advertisement -

ಬೆಳ್ತಂಗಡಿ : ಶರಾಬು ಕುಡಿಯಲು ಕರೆದದ್ದಕ್ಕೆ ತಿರಸ್ಕರಿಸಿದ ಕಾರಣ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ ಘಟನೆ ಮಚ್ಚಿನ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.

ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಿರುವ ಸದ್ಗುರು ಹೋಟೆಲಿನ ಕ್ಯಾಶಿಯರ್ ಪ್ರತಿಭಾ ಬಿ ರೈ ಅವರು, ಗುರುವಾರ ಸಂಜೆ ಹೋಟೆಲಿನಲ್ಲಿದ್ದ ವೇಳೆ ಆರೋಪಿ ಕೇಶವ ಪೂಜಾರಿ ಎಂಬಾತನು ಹೋಟೆಲಿನ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು, ಹೋಟೆಲಿನಲ್ಲಿ ಕೆಲಸ ಮಾಡುವ ಚಂದ್ರ ಎಂಬವರನ್ನು ಶರಾಬು ಕುಡಿಯಲು ಕರೆದಿರುತ್ತಾನೆ. ಈ ಬಗ್ಗೆ ಪ್ರತಿಭಾರವರು ಆಕ್ಷೇಪಿಸಿದಾಗ, ಆರೋಪಿಯು ಪ್ರತಿಭಾರನ್ನು ಅವಾಚ್ಯ ಶಬ್ದದಿಂದ ಬೈದಿದ್ದು,. ಈ ವೇಳೆ ಪ್ರತಿಭಾರ ಮಗ ಹೃತಿಕ್ ರೈ ಎಂಬಾತನು ಆರೋಪಿತನ ಬಳಿ ಹೋಗಿ ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಬೈಯ್ಯಬಾರದು ಎಂದು ತಿಳಿ ಹೇಳಿ ಬರುತ್ತಿದ್ದಂತೆ, ಆರೋಪಿಯು ಹೃತಿಕ್ ಗೆ ಹಲ್ಲೆ ನಡೆಸಿರುತ್ತಾನೆ . ಗಲಾಟೆ ಬಿಡಿಸಲು ಬಳಿ ಬಂದ ಹೋಟೆಲಿನ ಕೆಲಸದಾಳು ಚಂದ್ರರವರಿಗೆ ಕೂಡ ಆರೋಪಿಯು ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 28/2024 ಕಲಂ: 341 ,323, 504, 506 IPC ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಶವ ಪೂಜಾರಿ ಅವರು ಹೃತಿಕ್ ರೈ ಹಾಗೂ ಚಂದ್ರರವರ ವಿರುದ್ಧ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರತಿದೂರು ನೀಡಿದ್ದು, ಅಪರಾಧ ಕ್ರಮಾಂಕ 29/2024 ಕಲಂ 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಎರಡೂ ದೂರುಗಳನ್ನು ಸ್ವೀಕರಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!