Saturday, May 4, 2024
spot_imgspot_img
spot_imgspot_img

ಅಂತರ್ಜಾತೀಯ ವಿವಾಹಕ್ಕೆ ವಿರೋಧ-ನದಿಗೆ ಹಾರಿ ಪ್ರೇಮಿಗಳ ಆತ್ಮಹತ್ಯೆ!

- Advertisement -G L Acharya panikkar
- Advertisement -

ಹಾಸನ: ಹಾಸನ ಜಿಲ್ಲೆ ಬಾಗೂರು ನವಿಲೆ ಸುರಂಗದ ಬಳಿ ಬೈಕ್ ಮತ್ತು ಚಪ್ಪಲಿ ಬಿಟ್ಟು ನಾಪತ್ತೆಯಾಗಿದ್ದ ಯುವ ಪ್ರೇಮಿಗಳ ಮೃತದೇಹ ಹೇಮಾವತಿ ನಾಲೆಯಲ್ಲಿ ಪತ್ತೆಯಾಗಿದೆ.

ನವೆಂಬರ್ 16 ರಂದು ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು ಬಳಿಯ ಹೇಮಾವತಿ ಕಾಲುವೆ ಸುರಂಗದ ಬಳಿ ಬೈಕ್ ನಿಲ್ಲಿಸಿ ಜೋಡಿ ನಾಪತ್ತೆಯಾಗಿತ್ತು. ಇಬ್ಬರ ಮೃತದೇಹ ತುಮಕೂರು ಜಿಲ್ಲೆ ನೊಣವಿನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.

ಒಬ್ಬರನ್ನೊಬ್ಬರು ಬಟ್ಟೆಯಿಂದ ಕಟ್ಟಿಕೊಂಡು ನಾಲೆಗೆ ಜಿಗಿದಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದ ಸುಶ್ಮಿತ(18) ಹಾಗೂ ಮತಿಘಟ್ಟ ಗ್ರಾಮದ ರಮೇಶ್(19) ಮೃತರು. 

ಐಟಿಐ ಓದುತ್ತಿದ್ದ ರಮೇಶ್‌ ಹಾಗೂ ಪದವಿ ಓದುತ್ತಿದ್ದ ಸುಶ್ಮಿತಾ ನಡುವೆ ಪ್ರೇಮಾಂಕುರವಾಗಿತ್ತು. ಇವರಿಬ್ಬರು ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಸಹ ಬೇರೆ ಬೇರೆ ಜಾತಿಯಾಗಿದ್ದರಿಂದ ಮನೆಯಲ್ಲಿ ಮದುವೆಗೆ ವಿರೋಧ ಇತ್ತು. ಮನೆಯವರ ವಿರೋಧಕ್ಕೆ ಹೆದರಿ ಯುವಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ.

- Advertisement -

Related news

error: Content is protected !!