- Advertisement -
- Advertisement -




ಹಾಸನ : ದಂಪತಿಗಳು ನಾಲ್ಕು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮದುವೆ ಆಗಿ 22 ವರ್ಷಗಳು ಆಗಿತ್ತು. ಇತ್ತಿಚಿಗೆ ಪತಿ ಅಯ್ಯಪ್ಪ ಮಾಲೆ ಹಾಕಿದ್ದು, ಇರುಮುಡಿ ಕಟ್ಟುವ ವೇಳೆ ಪತ್ನಿಯ ಸ್ಥಾನದಲ್ಲಿ ಬೇರೊಬ್ಬ ಮಹಿಳೆ ಪೂಜೆ ಸಲ್ಲಿಸಿದ್ದಾಳೆ. ಈ ವಿಚಾರ ತಿಳಿದ ಪತ್ನಿ ಪತಿಯನ್ನು ತರಾಟೆಗೆ ತೆಗೆದುಕೊಳ್ಳಲು ಹೋಗಿ ಹೆಣವಾಗಿದ್ದಾಳೆ. ಈ ಘಟನೆ ನಡೆದಿರೋದು ಹಾಸನದ ಆಲೂರು ತಾಲೂಕಿನ ಯಡೂರು ಗ್ರಾಮದಲ್ಲಿ. ರಾಧಾ(40)ಕೊಲೆಯಾದ ಪತ್ನಿ. ಕುಮಾರ್ ಕೊಲೆಗೈದ ಪತಿ.
ಕುಮಾರ್ ಶಬರಿಮಲೆಗೆ ಹೋಗಿ ಬಂದ ದಿನವೇ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಪತಿಯ ಎರಡನೇ ಮದುವೆ ಬಗ್ಗೆ ರಾಧಾ ಪ್ರಶ್ನಿಸಿದ್ದು, ಇಬ್ಬರ ನಡುವೆ ಭಾರೀ ಜಗಳ ನಡೆದಿದೆ. ಗಲಾಟೆ ತಾರಕಕ್ಕೇರಿ ಈ ವೇಳೆ ಕುಮಾರ್, ರಾಧಾಳನ್ನ ಕೊಲೆಗೈದಿದ್ದಾನೆ. ಬಳಿಕ ಆಕೆಯ ಮೃತದೇಹವನ್ನು ಬಟ್ಟೆಯಲ್ಲಿ ಸುತ್ತಿ ಬೈಕ್ ನಲ್ಲಿ ಕೊಂಡೊಯ್ದು ಯಗಚಿ ನದಿಗೆ ಎಸೆದಿದ್ದ ಎನ್ನಲಾಗಿದೆ. ಸದ್ಯ ಆಲೂರು ಠಾಣೆ ಪೊಲೀಸರು ಪತಿಯನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
- Advertisement -








