Sunday, June 7, 2026
spot_imgspot_img
spot_imgspot_img

ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್‌ ನಾಪತ್ತೆ

- Advertisement -
- Advertisement -

ಪಡುಬಿದ್ರೆ: ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್‌ ಕಾಪು ಜನಾರ್ಧನ ದೇವಸ್ಥಾನ ಬಳಿಯ ಅಂಗಡಿ ಮನೆ ನಿವಾಸಿ ಶೃತಿನ್ ಶೆಟ್ಟಿ(35) ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಅಕ್ಟೋಬರ್ 16ರಂದು ಕಾರ್ಕಳಕ್ಕೆ ಕರ್ತವ್ಯಕ್ಕೆ ತೆರಳಿದ್ದ ಇವರು ಅಕ್ಟೋಬರ್ 19 ರಂದು ಫೋನ್ ಮಾಡಿ ತಾನು ನಂದಿಕೂರಿನಲ್ಲಿ ಇದ್ದು ಮನೆಗೆ ಬರುವುದಾಗಿ ಪತ್ನಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ಪೂಜಾ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!