Sunday, May 5, 2024
spot_imgspot_img
spot_imgspot_img

ಒಂದೇ ಒಂದು ಕಿತ್ತಳೆ ಹಣ್ಣು ತಿಂದ್ರೆ ಇಷ್ಟು ಖಾಯಿಲೆ ಗುಣವಾಗುತ್ತೆ ನೋಡಿ!

- Advertisement -G L Acharya panikkar
- Advertisement -

ಕಿತ್ತಳೆ ಹಣ್ಣು ಚರ್ಮದಿಂದ ಹಿಡಿದು ಹೊಟ್ಟೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳವರೆಗೆ ಉತ್ತಮ ಪರಿಹಾರ ನೀಡುತ್ತದೆ. ಯಕೃತ್ ಸಮಸ್ಯೆ ಉಳ್ಳವರಿಗೂ ಸಹ ಕಿತ್ತಳೆ ಹಣ್ಣು ಉತ್ತಮವಾಗಿದೆ.

ಕಿತ್ತಳೆ ಹಣ್ಣನ್ನು ಸೇವಿಸುವುದರಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಡಿ, ಮತ್ತು ವಿಟಮಿನ್ ಎ ಸತ್ವ ಅಡಗಿದೆ ಜೊತೆಗೆ ಹಲವು ಸಂಯುಕ್ತಗಳಾದ ಕ್ಯಾರೋಟಿನಾಯಡ್ಸ್ ಮತ್ತು ಪ್ಲೆವೊನಾಯಡ್ಸ್ ಗಳು ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತವೆ. ಇದರಿಂದ ಸೊಂಕುಗಳು ಬಾರದಂತೆ ತಡೆಯಬಹುದಾಗಿದೆ. ಶೀತ ಮತ್ತು ಜ್ವರದಿಂದ ನಿಮ್ಮನ್ನು ಸುರಕ್ಷಿತವಾಗಿರಿಸಲು ಮತ್ತು ಇದರಿಂದಾಗುವ ಹಾನಿಯನ್ನು ಕಡಿಮೆ ಮಾಡಲು ಸಹ ನೆರವಾಗುತ್ತದೆ.

ಅಪಾರ ಪ್ರಮಾಣದ ನೀರಿನ ಅಂಶ ಇರುವುದು ನಮಗೆಲ್ಲರಿಗೂ ಗೊತ್ತಿರುವ ಸಂಗತಿ.ಕಿತ್ತಳೆ ಹಣ್ಣಿನಲ್ಲಿ ಸುಮಾರು ಶೇಕಡ 87 ರಷ್ಟು ನೀರಿನ ಅಂಶ ಸೇರಿರುತ್ತದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ನಾವು ನೀರು ಕಡಿಮೆ ಕುಡಿಯುತ್ತೇವೆ. ಇಂತಹ ಸಮಯದಲ್ಲಿ ಕಿತ್ತಳೆ ಹಣ್ಣು ಸೇವನೆ ನಮ್ಮ ದೇಹದಲ್ಲಿ ನೀರಿನ ಅಂಶದ ಸಮತೋಲನ ಕಾಪಾಡುತ್ತದೆ.

ನಾವು ವಯಸ್ಸಾದಂತೆ ನಮ್ಮ ಕಣ್ಣುಗಳು ಸಹ ಹಾನಿಗೊಳಗಾಗುತ್ತವೆ. ಆದರೆ ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಎ, ಸಿ ಮತ್ತು ಪೊಟ್ಯಾಶಿಯಂನಂತಹ ಪೋಷಕಾಂಶಗಳು ಕಣ್ಣಿನ ಆರೋಗ್ಯ ಹೆಚ್ಚಿಸುತ್ತವೆ. ಆದ್ದರಿಂದ ದೃಷ್ಟಿ ಚೆನ್ನಾಗಿರ ಬೇಕೆಂದು ಬಯಸುವವರು ಪ್ರತಿದಿನ ಕಿತ್ತಳೆ ತಿನ್ನಿರಿ.
ಕಿತ್ತಳೆ ಹಣ್ಣು ಫೈಬರ್ ಅನ್ನು ಹೊಂದಿರುತ್ತದೆ. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಕಿತ್ತಳೆ ಹಣ್ಣಿನಲ್ಲಿರುವ ಫೈಬರ್ ಹೊಟ್ಟೆಯ ಹಸಿವನ್ನು ನೀಗಿಸುತ್ತದೆ ಮತ್ತು ಕಡಿಮೆ ಆಹಾರವನ್ನು ಸೇವಿಸುವಂತೆ ಮಾಡುತ್ತದೆ. ಈ ಹಣ್ಣಿನಲ್ಲಿ ಕ್ಯಾಲೊರಿ ಕಡಿಮೆ ಇರುತ್ತದೆ. ಕಿತ್ತಳೆ ಹಣ್ಣನ್ನು ಜ್ಯೂಸ್​ ರೂಪದಲ್ಲಿ ಕುಡಿಯುವುದು ಕೂಡ ದೇಹಕ್ಕೆ ಒಳ್ಳೆಯದು.

ವಿಟಮಿನ್ ಸಿ ಇದರಲ್ಲಿ ಸಮೃದ್ಧವಾಗಿದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಇರಿಸುವ ಮೂಲಕ ಹೃದ್ರೋಗವನ್ನು ತಡೆಯಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಕಿತ್ತಳೆಯಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ರಕ್ಷಣೆ ನೀಡುತ್ತದೆ.
ಇದು ಬೀಟಾ – ಕ್ಯಾರೊಟಿನ್ ಅಂಶವನ್ನು ಹೊಂದಿದ್ದು, ಒಂದು ಶಕ್ತಿಯುತ ಉತ್ಕರ್ಷಣ ನಿರೋಧಿಯಾಗಿದ್ದುಕೊಂಡು ತ್ವಚೆಯ ಕೋಶಗಳನ್ನು ಹಾನಿಯಾಗುವಲ್ಲಿಂದ ರಕ್ಷಿಸುತ್ತದೆ. ಕಿತ್ತಳೆಯ ಅತ್ಯಮೂಲ್ಯ ಆರೊಗ್ಯ ಪ್ರಯೋಜನಗಳಲ್ಲಿ ಇದೂ ಒಂದಾಗಿದೆ. ಚಳಿಗಾಲದಲ್ಲಿ ಮರೆಯದೇ ಕಿತ್ತಳೆ ಹಣ್ಣನ್ನು ಸೇವನೆ ಮಾಡಿ.

- Advertisement -

Related news

error: Content is protected !!