Saturday, April 27, 2024
spot_imgspot_img
spot_imgspot_img

ಮೊಳಕೆ ಬರಿಸಿದ ಕಾಳು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳು

- Advertisement -G L Acharya panikkar
- Advertisement -

ಮೊಳಕೆ ಬರಿಸಿದ ಕಾಳುಗಳು ಆರೋಗ್ಯಕ್ಕೆ ಉತ್ತಮ ಪೋಷಣೆ ನೀಡುತ್ತವೆ. ಇದರ ಉಪಯೋಗವನ್ನು ಪ್ರಾಚೀನ ಕಾಲದಿಂದಲೂ ಮಾಡಲಾಗುತ್ತಿದೆ. ಚೀನೀ ಪಾಕವಿಧಾನದಲ್ಲಿ ಮೊಳಕೆ ಬರಿಸಿದ ಕಾಳುಗಳನ್ನು ಪ್ರಧಾನ ಆಹಾರ ಎಂದು ಪರಿಗಣಿಸಲಾಗಿದೆ. ಮೊಳಕೆ ಭರಿಸಿದ ಧಾನ್ಯಗಳಲ್ಲಿ ಸಂಪೂರ್ಣವಾದ ಪೋಷಕಾಂಶಗಳು ಹಾಗೂ ಜೀವಸತ್ವಗಳು ಇರುತ್ತವೆ.

ನಿಯಮಿತವಾದ ಸೇವನೆಯಿಂದ ಆರೋಗ್ಯದ ಸುಧಾರಣೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಗರ್ಭಿಣಿಯರಿಗೆ, ಬೆಳೆಯುವ ಮಕ್ಕಳಿಗೆ ವೃದ್ಧರಿಗೆ ಸೇರಿದಂತೆ ಎಲ್ಲಾ ವಯೋಮಾನದವರು ಸೇವಿಸಬಹುದು.

ಮೊಳಕೆ ಬರಿಸಿದ ಕಾಳುಗಳಲ್ಲಿ ಸಮೃದ್ಧವಾಗಿ ನಾರಿನಂಶ ಹಾಗೂ ಒಮೆಗಾ-3 ಕೊಬ್ಬಿನಾಮ್ಲಗಳು ಇರುತ್ತವೆ. ಇದನ್ನು ನಿತ್ಯ ಸೇವಿಸುವುದರಿಂದ ಚಯಾಪಚಯ ಕ್ರಿಯೆ ಸುಧಾರಿಸುವುದು. ಮಲಬದ್ಧತೆ, ಅತಿಸಾರ ಹಾಗೂ ಕರುಳಿನ ಕ್ಯಾನ್ಸರ್ ಆಗುವುದನ್ನು ತಡೆಯುವುದು. ಇದು ಪೋಷಕಾಂಶಳನ್ನು ಹೀರಿಕೊಳ್ಳಲು ಸಹಾಯ ಮಾಡುವುದು. ಜೊತೆಗೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ಮಧುಮೇಹ ಹೊಂದಿದವರಿಗೆ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು ಮೊಳಕೆ ಬರಿಸಿದ ಕಾಳುಗಳನ್ನು ಸೇವಿಸಲು ಸಲಹೆ ನೀಡಲಾಗುವುದು. ಮೊಳಕೆ ಭರಿಸಿದ ಕಾಳುಗಳು ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವುದು. ಅವುಗಳಲ್ಲಿ ಕಾರ್ಬೋಹೈಡ್ರೇಟ್ಸ್ ಕಡಿಮೆ ಪ್ರಮಾಣದಲ್ಲಿ ಇರುತ್ತವೆ. ಜೊತೆಗೆ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಸಹ ಸಾಭೀತು ಪಡಿಸಿವೆ.

ಮೊಳಕೆ ಭರಿಸಿದ ಕಾಳುಗಳಲ್ಲಿ ನಾರಿನಾಂಶ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿ ಇರುವುದರಿಂದ ಹೃದಯದ ಆರೋಗ್ಯವನ್ನು ಸುಲಭವಾಗಿ ಸುಧಾರಿಸುವುದು. ಹೃದಯದ ಉತ್ತಮ ಆರೋಗ್ಯಕ್ಕೆ ಈ ಎರಡು ಪೋಷಕಾಂಶಗಳು ಅತ್ಯಗತ್ಯ. ಇವುಗಳಲ್ಲಿ ಇರುವ ನಾರಿನಂಶ ಮತ್ತು ಒಮೆಗಾ-3 ಕೊಬ್ಬಿನಾಮ್ಲ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು. ಹೃದಯದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಜೊತೆಗೆ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳು ಬರದಂತೆ ಕಾಪಾಡುವುದು.

- Advertisement -

Related news

error: Content is protected !!