Monday, May 6, 2024
spot_imgspot_img
spot_imgspot_img

ಒಂದೆಲಗದ ಉಪಯೋಗ

- Advertisement -G L Acharya panikkar
- Advertisement -

ಬ್ರಾಹ್ಮಿ ಅಥವಾ ಒಂದೆಲಗ ಎನ್ನುವುದು ಹಲವಾರು ವಿಧದ ಔಷಧೀಯ ಗುಣಗಳನ್ನು ಹೊಂದಿರುವಂತಹ ಒಂದು ಸೊಪ್ಪು ಎಂದು ಹೇಳಬಹುದು. ಇದನ್ನು ಹಿಂದಿನಿಂದಲೂ ಆಹಾರ ಕ್ರಮ ಹಾಗೂ ಔಷಧಿಯಾಗಿ ಬಳಕೆ ಮಾಡಿಕೊಂಡು ಬರಲಾಗುತ್ತಿದೆ.

ಮಕ್ಕಳಿಗೆ ಬೆಳಗ್ಗೆ ಇದರ ಎರಡೆರಡು ಎಲೆಗಳನ್ನು ತಿನ್ನಲು ಕೊಡುವುದರಿಂದ ಮಕ್ಕಳ ಜ್ಞಾಪಕಶಕ್ತಿ ಹೆಚ್ಚುತ್ತದೆ. ದಿನಕ್ಕೆ 4 -5 ಎಲೆ ಸೇವಿಸುವುದರಿಂದ ಮಾತಿನ ಉಗ್ಗುವಿಕೆ ಇಲ್ಲವಾಗುವುದು.

ಮಾನಸಿಕ ಒತ್ತಡವು ಹೆಚ್ಚಾದರೆ ಅದು ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವುದು. ಈ ಕಾರಣ ಮಾನಸಿಕ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅತೀ ಅಗತ್ಯ. ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಆಯುರ್ವೇದದಲ್ಲಿ ಬ್ರಾಹ್ಮಿಯನ್ನು ಬಳಸಲಾಗಿದೆ.
ಬ್ರಾಹ್ಮಿ ತುಂಬಾ ಪರಿಣಾಮಕಾರಿ ಔಷಧಿಯಾಗಿದ್ದು, ಇದು ಚಿಕಿತ್ಸಕ ಗುಣ ಹೊಂದಿದೆ ಹಾಗೂ ಮನಸ್ಸಿಗೆ ಕೂಡ ಶಮನ ನೀಡುವುದು. ಇದು ನರವ್ಯವಸ್ಥೆಯನ್ನು ಸುಧಾರಣೆ ಮಾಡಿಕೊಂಡು ಮೆದುಳಿನ ಕಾರ್ಯವನ್ನು ಉತ್ತಮಪಡಿಸುವುದು

ಬ್ರಾಹ್ಮಿಯನ್ನು ನಿತ್ಯವೂ ಸೇವನೆ ಮಾಡಿದರೆ ಅದರಿಂದ ಮೆದುಳಿನ ಅಂಗಾಂಶಗಳಿಗೆ ಶಕ್ತಿ ಸಿಗುವುದು.ಆಘಾತ ಚಿಕಿತ್ಸೆಗೆ ಬ್ರಾಹ್ಮಿ ತುಂಬಾ ಸಹಕಾರಿ ಎಂದು ಹೇಳಲಾಗಿದೆ. ಅಧ್ಯಯನಗಳು ಹೇಳುವ ಪ್ರಕಾರ ಅಪಸ್ಮಾರದಂತಹ ಸಮಸ್ಯೆಗಳು ಇರುವವರಲ್ಲಿ ಬ್ರಾಹ್ಮಿಯು ಉರಿಯೂತ ನಿಯಂತ್ರಿಸುವುದು, ನರವ್ಯವಸ್ಥೆ ಸರಿಪಡಿಸಿ ಆಘಾತವನ್ನು ತಡೆಯುವುದು.ಯಾವುದೇ ಒತ್ತಡ ಹಾಗೂ ಚಿಂತೆಯು ಇಲ್ಲದೆ ಇರುವಂತಹ ಶಾಂತ ಹಾಗೂ ಆರಾಮ ಮನಸ್ಥಿತಿಯು ಸಿಗಬೇಕು ಎಂದು ನಾವೆಲ್ಲರೂ ಬಯಸುತ್ತೇವೆ.

ಬ್ರಾಹ್ಮಿಯು ನರ ವ್ಯವಸ್ಥೆಯನ್ನು ಶಾಂತವಾಗಿಟ್ಟು, ಆರಾಮ ನೀಡುವುದು ಹಾಗೂ ಆಮ್ಲಜನಕವನ್ನು ಉತ್ತಮಪಡಿಸುವುದು.
ದಿನಿವಿಡ ದಣಿದಿದ್ದರೂ ಅದರ ಪ್ರಭಾವವು ತಿಳಿದುಬರದು. ಹೃದಯದ ಮತ್ತು ಶ್ವಾಸಕೋಶದ ಆರೋಗ್ಯವನ್ನು ಇದು ಕಾಪಾಡುವುದು.

- Advertisement -

Related news

error: Content is protected !!