Monday, May 6, 2024
spot_imgspot_img
spot_imgspot_img

ಸೇಬುಹಣ್ಣಿನ ಆರೋಗ್ಯ ಪ್ರಯೋಜನ

- Advertisement -G L Acharya panikkar
- Advertisement -

ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು ಎನ್ನುವುದು ಹಳೆಯ ಇಂಗ್ಲಿಷ್ ನಾಣ್ನುಡಿ. ಇದು ನಿಜವಾದರೂ ಇದನ್ನು ಪಾಲಿಸಿಕೊಂಡು ಹೋಗುವವರು ತುಂಬಾ ಕಡಿಮೆ. ಸೇಬಿನಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಮತ್ತು ಇದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು

ವಿಶ್ವದ ಹೆಚ್ಚಿನ ಭಾಗದಲ್ಲಿ ಬೆಳೆಯಲ್ಪಡುವಂತಹ ಸೇಬು ನಾರಿನಾಂಶ ಮತ್ತು ಪೆಕ್ಟಿನ್ ಎನ್ನುವ ಅಂಶದಿಂದ ಸಮೃದ್ಧವಾಗಿದೆ. ಇದರೊಂದಿಗೆ ಸೇಬಿನಲ್ಲಿ ವಿವಿಧ ರೀತಿಯ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಆಂಟಿಆಕ್ಸಿಡೆಂಟ್ ಗಳಾಗಿರುವಂತಹ ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಪೊಟಾಶಿಯಂ ಇದೆ. ಸೇಬು ತಿಂದ ಪರಿಣಾಮವಾಗಿ ಪ್ರಾಣಿಗಳಲ್ಲಿ ಮೂಳೆ ಸಾಂದ್ರತೆಯು ಹೆಚ್ಚಾಗಿದೆ ಎಂಧು ಅಧ್ಯಯನಗಳು ಕಂಡುಕೊಂಡಿವೆ.

ಇದು ಆಂಟಿಆಕ್ಸಿಡೆಂಟ್ ಹೊಂದಿರುವ ಅಗ್ರ 12 ಆಹಾರಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ಇದನ್ನು ತಿಂದರೆ ಆರೋಗ್ಯವು ಚೆನ್ನಾಗಿರುತ್ತದೆ. ಸೇಬನ್ನು ಸಿಪ್ಪೆ ತೆಗೆಯದೆ ತಿಂದರೆ ಅದರಿಂದ ಹಲವಾರು ರೀತಿಯ ಹೆಚ್ಚಿನ ಲಾಭಗಳು ದೇಹಕ್ಕೆ ಲಭ್ಯವಾಗಲಿದೆ.
ಖಾಲಿ ಹೊಟ್ಟೆಯಲ್ಲಿ ಕೆಲವು ಹಣ್ಣುಗಳನ್ನು ತಿನ್ನುವ ಬಗ್ಗೆ ತಪ್ಪು ಅಭಿಪ್ರಾಯಗಳು ಇವೆ. ಆದರೆ ಯಾವುದೇ ಅಧ್ಯಯನ ಕೂಡ ಖಾಲಿ ಹೊಟ್ಟೆಯಲ್ಲಿ ಹಣ್ಣು ತಿಂದರೆ ಆಗುವಂತಹ ಲಾಭಗಳ ಬಗ್ಗೆ ತಿಳಿಸಿಲ್ಲ.

ಇದೊಂದು ಮಧುಮೇಹಿ ಹಣ್ಣಾಗಿದ್ದು, ಇದನ್ನು ತಿಂಡಿ ವೇಳೆ ಸೇವಿಸಬಹುದು ಮತ್ತು ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಲು ಯಾವುದೇ ಸಲಹೆ ನೀಡಲಾಗುವುದಿಲ್ಲ. ಖಾಲಿ ಹೊಟ್ಟೆಯಲ್ಲಿ ತಿಂದರೆ ಅದರಿಂದ ಹಣ್ಣಿನಲ್ಲಿ ಇರುವಂತಹ ಸಕ್ಕರೆ ಅಂಶವನ್ನು ಹೀರಿಕೊಳ್ಳುವುದು ಮತ್ತು ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ.

ತುಂಬಾ ರುಚಿಕರವಾಗಿರುವಂತಹ ಸೇಬಿನಲ್ಲಿ ತುಂಬಾ ಕಡಿಮೆ ಕ್ಯಾಲರಿ ಇದೆ ಮತ್ತು ಒಂದು ಮಧ್ಯಮ ಗಾತ್ರದ ಸೇಬಿನಲ್ಲಿ 95 ಕ್ಯಾಲರಿ,ಶೇ. 86ರಷ್ಟು ನೀರಿನಾಂಶವಿದೆ. ಸೇಬು ತಿಂದರೆ ಅದರಿಂದ ಕೊಲೆಸ್ಟ್ರಾಲ್ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುವುದು ಮತ್ತು ಇದರಿಂದ ರಕ್ತನಾಳಗಳಲ್ಲಿ ತುಂಬಿರುವಂತಹ ಪದರವು ಶೇ.48ರಷ್ಟು ಕಡಿಮೆ ಆಗುವುದು ಎಂದು ಅಧ್ಯಯನಗಳು ಹೇಳಿವೆ. ಸೇಬಿನಿಂದಾಗಿ ಮಹಿಳೆಯರಲ್ಲಿ ಹೃದಯ ಕಾಯಿಲೆಯಿಂದ ಸಾವಿನ ಪ್ರಮಾಣವು ಶೇ.43ರಷ್ಟು ಮತ್ತು ಪುರುಷರಲ್ಲಿ ಶೇ.19ರಷ್ಟು ಕಡಿಮೆ ಆಗಿದೆ ಎಂದು ಅಧ್ಯಯನಗಳು ಹೇಳಿವೆ.

- Advertisement -

Related news

error: Content is protected !!