Saturday, April 27, 2024
spot_imgspot_img
spot_imgspot_img

ಆಗಾಗ ಏಲಕ್ಕಿ ಸೇವನೆ ಮಾಡಿದರೆ ಸಿಗುವ ಆರೋಗ್ಯ ಪ್ರಯೋಜನಗಳು

- Advertisement -G L Acharya panikkar
- Advertisement -

ನಾವು ಬಳಸುವ ಹಲವಾರು ಮಸಾಲೆ ಪದಾರ್ಥಗಳಲ್ಲಿ ಏಲಕ್ಕಿ ಸಹ ಒಂದು. ಇದರಲ್ಲಿ ಅನೇಕ ಆರೋಗ್ಯದ ಲಾಭಗಳು ಸಿಗುತ್ತವೆ. ಹಬ್ಬ-ಹರಿದಿನಗಳಲ್ಲಿ ಕೆಲವೊಂದು ವಿಶೇಷ ಅಡುಗೆಗಳಲ್ಲಿ ಏಲಕ್ಕಿಯನ್ನು ಬಳಕೆ ಮಾಡುತ್ತಾರೆ. ಈ ಮಧ್ಯದಲ್ಲಿ ಬೇರೆ ಬಗೆಯ ಆಹಾರ ಪದಾರ್ಥಗಳನ್ನು ತಯಾರು ಮಾಡುವಾಗ ಸಹ ಏಲಕ್ಕಿ ಕಂಡುಬರುತ್ತದೆ. ಬನ್ನಿ ಈ ಲೇಖನದಲ್ಲಿ ಏಲಕ್ಕಿಯ ವಿವಿಧ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ..

ಮಳೆಗಾಲದಲ್ಲಿ ನಮ್ಮ ಆರೋಗ್ಯಕ್ಕೆ ಎದುರಾಗುವ ಹಲವಾರು ಸೋಂಕುಗಳನ್ನು ಅತ್ಯಂತ ಸುಲಭವಾಗಿ ನಿವಾರಣೆ ಮಾಡುವ ಗುಣಲಕ್ಷಣಗಳು ಏಲಕ್ಕಿಯಲ್ಲಿ ಸಿಗುತ್ತವೆ. ಏಕೆಂದರೆ ಇದರಲ್ಲಿ ಬ್ಯಾಕ್ಟೀರಿಯಾ ಹಾಗೂ ಫಂಗಸ್ ಸೋಂಕುಗಳನ್ನು ತಡೆ ಹಾಕುವ ಆಂಟಿ ಮೈಕ್ರೋಬಿಯಲ್ ಲಕ್ಷಣಗಳು ಸಿಗುತ್ತವೆ.
ಸಂಶೋಧಕರು ಹೇಳುವ ಹಾಗೆ ಏಲಕ್ಕಿಯಿಂದ ತಯಾರು ಮಾಡಿದ ಎಣ್ಣೆ ಮನುಷ್ಯನ ದೇಹದ ಜೀವಕೋಶಗಳ ಮಟ್ಟದಲ್ಲಿ ಕೆಲಸ ಮಾಡಿ ಸಂಪೂರ್ಣ ಆರೋಗ್ಯವನ್ನು ಎಲ್ಲಾ ಆಯಾಮಗಳಲ್ಲಿ ರಕ್ಷಣೆ ಮಾಡುವ ಗುಣ ಪಡೆದಿದೆ.

ಏಲಕ್ಕಿ ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ಹೇಳುತ್ತಾರೆ. ಹೃದಯಾಘಾತವನ್ನು ತಪ್ಪಿಸುವ ಗುಣವನ್ನು ಏಲಕ್ಕಿ ಪಡೆದಿದೆ. ಏಕೆಂದರೆ ಇದರಲ್ಲಿ ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ. ಇದರಿಂದ ಹೃದಯದ ಕಾರ್ಯಚಟುವಟಿಕೆಗಳನ್ನು ಅತ್ಯುತ್ತಮ ಪಡಿಸುವ ಸ್ವಭಾವವನ್ನು ಏಲಕ್ಕಿಯಿಂದ ನಿರೀಕ್ಷೆ ಮಾಡಬಹುದು. ಏಲಕ್ಕಿ ಸೇವನೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶದ ಕಡಿಮೆ ಪ್ರಮಾಣ ವರದಿಯಾದ ಬಗ್ಗೆ ಮಾಹಿತಿ ಸಿಕ್ಕಿದೆ.

ಇದರ ಜೊತೆಗೆ ಹೃದಯಕ್ಕೆ ಹಾನಿಕರ ಎನಿಸುವ ಟ್ರೈಗ್ಲಿಸರೈಡ್ ಅಂಶಗಳ ಪ್ರಮಾಣ ಕೂಡ ಕಡಿಮೆಯಾಗಿತ್ತು. ಇದರಿಂದ ಹೃದಯದ ಆರೋಗ್ಯ ಅತ್ಯುತ್ತಮ ಎನಿಸುವ ಬಗ್ಗೆ ಏಲಕ್ಕಿ ಕೆಲಸ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಶುಂಠಿ ಹಾಗೂ ಇನ್ನಿತರ ಆಹಾರ ಪದಾರ್ಥಗಳಂತೆ ಏಲಕ್ಕಿ ಕೂಡ ಹೊಟ್ಟೆಯ ಭಾಗದ ಅಲ್ಸರ್ ಸಮಸ್ಯೆಯನ್ನು ನಿವಾರಣೆ ಮಾಡುವ ಗುಣವನ್ನು ಪಡೆದಿದೆ.

- Advertisement -

Related news

error: Content is protected !!