Sunday, May 5, 2024
spot_imgspot_img
spot_imgspot_img

ಆರೋಗ್ಯ ವರ್ಧಿಸುವ ಮೀನು

- Advertisement -G L Acharya panikkar
- Advertisement -

ಮೀನು, ಏಡಿ ಮುಂತಾದ ಸೀಫುಡ್‌ಗಳು ಹಲವಾರು ಪೌಷ್ಟಿಕಾಂಶಗಳ ಆಗರವಾಗಿರುತ್ತವೆ. ಆದ್ದರಿಂದ ವಾರಕ್ಕೊಮ್ಮೆಯಾದರೂ ಇವುಗಳಿಂದ ಮಾಡಿದ ಆಹಾರ ಸೇವನೆ ಆರೋಗ್ಯಕ್ಕೆ ಉತ್ತಮ.

-ಬೂತಾಯಿ ಮೀನಿನಲ್ಲಿ ಒಮೆಗಾ-3 ಫ್ಯಾಟಿ ಆ್ಯಸಿಡ್‌ ಇದೆ. ಇದು ಹೃದ್ರೋಗ ನಿವಾರಣೆಗೆ ಸಹಕಾರಿ. ಅಲ್ಲದೆ ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಇವುಗಳಲ್ಲಿರುವ ಕ್ಯಾಲ್ಷಿಯಂ, ವಿಟಮಿನ್‌ ಡಿ ಇತ್ಯಾದಿಗಳು ಕ್ಯಾನ್ಸರ್‌ ಕಾರಕಗಳ ವಿರುದ್ಧ ಹೋರಾಡುತ್ತವೆ. ಮೂಳೆಗಳನ್ನು ಗಟ್ಟಿಗೊಳಿಸುತ್ತವೆ. ಪ್ರೋಟೀನ್‌ ಸ್ನಾಯುಗಳನ್ನು ಬಲಗೊಳಿಸುತ್ತದೆ.

-ಮಧುಮೇಹವಿದ್ದರು ಬಂಗಡೆ ಮೀನನ್ನು ಹೆಚ್ಚು ಸೇವಿಸಿದರೆ ಒಳ್ಳೆಯದು. ಇದು ರಕ್ತದೊತ್ತಡವನ್ನು ನಿಯಂತ್ರಿಸುವುದರ ಜೊತೆಗೆ ಸ್ನಾಯು ಸೆಳೆತವನ್ನು ದೂರ ಮಾಡುತ್ತದೆ. ಖಿನ್ನತೆಯಿಂದ ಬಳಲುವವರಿಗೆ ಇದರಲ್ಲಿರುವ ಒಮೇಗಾ ಫ್ಯಾಟಿ ಆ್ಯಸಿಡ್‌ ಪರಿಣಾಮಕಾರಿಯಾದ ಔಷಧವಾಗಿದೆ. ಕರುಳು ಕ್ಯಾನ್ಸರನ್ನು ತಡೆಯುವ ಶಕ್ತಿ ಈ ಮೀನಿಗಿದೆ. ಈ ಮೀನಿನಲ್ಲಿ ಸೆಲೇನಿಯಂ ಅಧಿಕ ಪ್ರಮಾಣದಲ್ಲಿದ್ದು, ಇದು ಹೃದಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಡಿಮೆ ರಕ್ತದೊತ್ತಡ ಇರುವವರಿಗೆ ಅತ್ಯುತ್ತಮವಾಗಿ ಪರಿಣಿಸಿರುವ ಇದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿರುವ ಕೊಲೆಸ್ಟ್ರಾಲ್‌ ಕಡಿಮೆಗೊಳಿಸುತ್ತದೆ. ಕಡಿಮೆ ಬೆಲೆಗೆ ಸಿಗುವ ಇದು ದೇಹ ತೂಕ ಇಳಿಸಿಕೊಳ್ಳುವವರಿಗೂ ಬೆಸ್ಟ್‌. ಪಾದರಸದ ಪ್ರಮಾಣ ಕಡಿಮೆಯಿರುವ ಈ ಮೀನನ್ನು ಯಾರು ಕೂಡ ತಿನ್ನಬಹುದು.

-ಏಡಿಯಲ್ಲಿ ಪ್ರೋಟೀನ್‌ ಅಧಿಕವಾಗಿರುವುದರಿಂದ ಇದನ್ನು ಬೆಳೆಯುವ ಮಕ್ಕಳಿಗೆ ಹೆಚ್ಚು ತಿನ್ನಿಸಬೇಕು. ಚರ್ಮ ಮತ್ತು ಕೂದಲಿನ ಕಾಂತಿವರ್ಧನೆಗೂ ಈ ಪ್ರೋಟೀನ್‌ ಸಹಕಾರಿಯಾಗಿದೆ. ಏಡಿಯಲ್ಲಿರುವ ವಿಟಮಿನ್‌ ಬಿ12 ರಕ್ತಹೀನತೆಯನ್ನು ನಿವಾರಿಸುತ್ತದೆ. ಗರ್ಭಿಣಿಯರಿಗೆ ಇದರ ಸೇವನೆ ತುಂಬಾ ಒಳ್ಳೆಯದು.

-ಪ್ರಾನ್ಸ್‌ ಅಥವಾ ಸೀಗಡಿಯಲ್ಲಿರುವ ಸೆಲೆನಿಯಂ ಕ್ಯಾನ್ಸರ್‌ ಕಾರಕಗಳ ವಿರುದ್ಧ ಹೋರಾಡುತ್ತದೆ. ಇದರಲ್ಲಿರುವ ಒಮೆಗಾ 3 ಫ್ಯಾಟಿ ಆ್ಯಸಿಡ್‌ ಬೇಡದ ಕೊಲೆಸ್ಟ್ರಾಲನ್ನು ನಿವಾರಿಸುತ್ತದೆ. ಇದರಲ್ಲಿ ವಿಟಮಿನ್‌ ಇ ಅತ್ಯಧಿಕವಾಗಿರುವುದರಿಂದ ಚರ್ಮದ ಆರೋಗ್ಯಕ್ಕೂ ಒಳ್ಳೆಯದು.

-ಬಿಳಿ ಪಾಂಪ್ರೆಟ್‌ ಮೀನು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಈ ಮೀನಿನ ಎಣ್ಣೆಯನ್ನು ಪ್ರತಿದಿನ ಸೇವಿಸಿದರೆ ದೃಷ್ಟಿ ಸಮಸ್ಯೆ ನಿವಾರಣೆಯಾಗುತ್ತದೆ. ಥೈರಾಯ್ಡ್‌ ಸಮಸ್ಯೆಯಿಂದ ಬಳಲುವವರು ಬಿಳಿ ಪಾಂಪ್ರೆಟ್‌ ಮೀನನ್ನು ಹೆಚ್ಚು ಸೇವಿಸಬೇಕು.

- Advertisement -

Related news

error: Content is protected !!