Friday, April 26, 2024
spot_imgspot_img
spot_imgspot_img

Health tips: ಕಿಡ್ನಿ ಸ್ಟೋನ್ ಸಮಸ್ಯೆಯ ಪರಿಹಾರಕ್ಕೆ ದಿನನಿತ್ಯದ ಕ್ರಮ ಹೀಗಿದ್ದಾರೆ ಒಳಿತು

- Advertisement -G L Acharya panikkar
- Advertisement -

ಮೂತ್ರಪಿಂಡದಲ್ಲಿ ಕಲ್ಲು ಬೆಳೆಯುವುದು ಅಥವಾ ಕಿಡ್ನಿ ಸ್ಟೋನ್ ಸಮಸ್ಯೆಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ಒಳಿತು. ಈ ಸಮಸ್ಯೆ ಕಾಡ ತೊಡಗಿದಾಗ ಹೊಟ್ಟೆ ನೋವು ತುಂಬಾ ಅತಿಯಾಗಿ ಕಂಡು ಬರುತ್ತದೆ. ಬೇಸಿಗೆಯ ಬೆಚ್ಚಗಿನ ಸಮಯದಲ್ಲಿ ಈ ಸಮಸ್ಯೆ ಕಂಡು ಬರುವುದು ಹೆಚ್ಚು. ಏಕೆಂದರೆ ದೇಹವು ಹೆಚ್ಚು ಉಷ್ಣಾವಂಶದಿoದ ಕೂಡಿರುವುದರಿಂದ ಸರಿಯಾಗಿ ನೀರನ ಪೂರೈಕೆ ಆಗುವುದಿಲ್ಲ. ಆರೋಗ್ಯದಲ್ಲಿ ಏರು-ಪೇರಾದಾಗ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಆದಷ್ಟು ಬೇಗ ವೈದ್ಯರಲ್ಲಿ ಸಲಹೆ ಪಡೆದುಕೊಳ್ಳುವುದು ಒಳಿತು.

ಸಾಮಾನ್ಯವಾಗಿ ಮೈ ಕೈ ನೋವು, ಜ್ವರ, ನೆಗಡಿಯಂತಹ ಕಾಯಿಲೆಗಳು ಬಂದಾಗಲೇ ನಮ್ಮ ದೇಹದ ಸುಸ್ತನ್ನು ಅಥವಾ ಕಿರಿಕಿರಿ ಭಾವನೆಯನ್ನು ಸಹಿಸಿಕೊಳ್ಳುವುದು ಕಷ್ಟ. ಹಾಗಿರುವಾಗ ಮೂತ್ರಪಿಂಡದಲ್ಲಿ ಕಲ್ಲು ಬೆಳೆದಾಗ ಪರಿಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ. ಬಹುಬೇಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಸಮಸ್ಯೆ ಬಾರದಂತೆ ಎಚ್ಚರವಹಿಸುವುದು ಉತ್ತಮ. ಹಾಗಾದರೆ ನಮ್ಮ ದಿನನಿತ್ಯದ ಕ್ರಮ ಹೇಗಿರಬೇಕು ಎಂಬುದನ್ನು ತಿಳಿಯೋಣ.

ಲಕ್ಷಣಗಳೇನು?

  • ಪಕ್ಕೆಲುಬುಗಳಲ್ಲಿ ನೋವು
  • ಮೂತ್ರ ವಿಸರ್ಜನೆಗೆ ಕಷ್ಟವಾಗುವುದು
  • ಅತಿಯಾದ ಹೊಟ್ಟೆ ನೋವು
  • ವಾಕರಿಕೆ
  • ಜ್ವರ ಮತ್ತು ಶೀತ ಕಂಡು ಬರುವುದು

ಪರಿಹಾರ
ಸಾಕಷ್ಟು ನೀರು ಕುಡಿಯಿರಿ
ನೀರು ಕುಡಿಯುವದರಿಂದ ಮೂತ್ರಪಿಂಡದಲ್ಲಿ ಹುಟ್ಟಿಕೊಂಡ ಕಲ್ಲುಗಳು ಕರಗುತ್ತವೆ. ಹಾಗಾಗಿ ನಿತ್ಯವೂ ಅತಿ ಹೆಚ್ಚು ಶುದ್ಧ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇಲ್ಲದಿದ್ದರೆ ಸಿಟ್ರಸ್ ಅಂಶ ಹೊಂದಿರುವ ತಂಪು ಪಾನೀಯ ಅಥವಾ ಜ್ಯೂಸ್ ಅನ್ನು ಸೇವಿಸಬಹುದು. ಕೇವಲ ರೋಗ ಬಂದಾಗ ಚಿಂತಿಸದೇ, ರೋಗ ಬಾರದಂತೆ ಆರೋಗ್ಯ ಕ್ರಮವನ್ನು ಬದಲಾಯಿಸಿಕೊಳ್ಳುವುದು ಉತ್ತಮ.

ತುಳಸಿ ಎಲೆಗಳ ಬಳಕೆ
ಸಾಮಾನ್ಯವಾಗಿ ಜ್ವರ ನೆಗಡಿ, ತಲೆನೋವಿನಂತಹ ಸಮಸ್ಯೆಗೆ ನಾವು ತುಳಸಿ ಎಲ್ಲೆಯನ್ನು ಮನೆಮದ್ದಾಗಿ ಬಳಸುತ್ತೇವೆ. ತುಳಸಿ ಎಲೆಗಳಲ್ಲಿರುವ ಕಲ್ಮಶ ನಿವಾರಕ ಗುಣ ಮೂತ್ರ ಪಿಂಡದ ಕಲ್ಲುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹಾಗೂ ಅದರಸಲ್ಲಿನ ಅಸೆಟಿಕ್ ಆಮ್ಲವು ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ.

ಎಳನೀರು
ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ತಾಜಾ ಎಳನೀರನ್ನು ಕುಡಿಯುವ ಅಭ್ಯಾಸ ಇರಲಿ. ಎಳನೀರು ಹೊಟ್ಟೆ ನೋವು ನಿವಾರಣೆಗೆ ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಅಜೀರ್ಣ, ವಾಂತಿ-ಬೇಧಿ ಉಂಟಾದಾಗಲೂ ಎಳನೀರನ್ನು ಸೇವಿಸುತ್ತೇವೆ. ಕಿಡ್ನಿ ಸ್ಟೋನ್ ನೋವು ನಿವಾರಣೆಗೂ ಕೂಡಾ ಎಳನೀರು ಸಹಾಯ ಮಾಡುತ್ತದೆ.

ಕಲ್ಲಂಗಡಿ ಹಣ್ಣು ಸೇವಿಸಿ
ಹೆಚ್ಚು ನೀರಿನ ಅಂಶ ಹೊಂದಿರುವ ಹಣ್ಣು ಕಲ್ಲಂಗಡಿ. ಹಾಗಾಗಿ ಕಿಡ್ನಿ ಸ್ಟೋನ್?ನಿಂದ ಬಳಲುತ್ತಿರುವವರು ಆದಷ್ಟು ಕಲ್ಲಂಗಡಿ ಹಣ್ಣುಗಳನ್ನು ಸೇವಿಸಿ. ಮೂತ್ರಪಿಂಡದಲ್ಲಿ ಬೆಳೆದ ಕಲ್ಲುಗಳನ್ನು ಹೊರಹಾಕಲು ಇದು ಸಹಾಯ ಮಾಡುತ್ತದೆ.

driving

- Advertisement -

Related news

error: Content is protected !!