Friday, May 17, 2024
spot_imgspot_img
spot_imgspot_img

ಹೆಬ್ರಿ: ಮನನೊಂದು ಮಹಿಳೆ ನೇಣು ಬಿಗಿದು ಆತ್ಮಹತ್ಯೆಗೆ ಶರಣು..!

- Advertisement -G L Acharya panikkar
- Advertisement -

ಹೆಬ್ರಿ : ಅನಾರೋಗ್ಯದಿಂದ ಮನನೊಂದು ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಬ್ರಿ ಜರವತ್ತು ಎಂಬಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿದ ಮಹಿಳೆ ಶಕುಂತಲಾ ಪೂಜಾರಿ (53) ಎಂದು ಗುರುತಿಸಲಾಗಿದೆ.

ಇವರು 2 ವರ್ಷಗಳಿಂದ ನೆನಪಿನ ಶಕ್ತಿ ಕಡಿಮೆ ಕಾಯಿಲೆಯಿಂದ ಬಳಲುತ್ತಿದ್ದರು. ಇದೇ ವಿಚಾರವಾಗಿ ಮನನೊಂದು ಮಾನಸಿಕ ಖಿನ್ನತೆಗೆ ಒಳಗಾಗಿ ಮಾ. 8ರಂದು ಹೆಬ್ರಿ ಗ್ರಾಮದ ಹೆಬ್ರಿ ಜರವತ್ತು ಪ್ರದೇಶದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!