Saturday, June 6, 2026
spot_imgspot_img
spot_imgspot_img

ವಿಟ್ಲ ಪೇಟೆ ಸಂಪೂರ್ಣ ಲಾಕ್‌ಡೌನ್!!

- Advertisement -
- Advertisement -

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಕೊರೋನ ಟಾಸ್ಕ್ ಪೋರ್ಸ್ ಸಭೆಯಲ್ಲಿ ವ್ಯಾಪಕವಾಗಿ ಕೊರೋನ ಸೋಂಕು ಹರಡುವ ಹಿನ್ನೆಲೆ ವಿಟ್ಲ ಪೇಟೆಯನ್ನು ಪಟ್ಟಣ ಪಂಚಾಯತ್ ನಿರ್ಣಯದಂತೆ ವಾರಾಂತ್ಯ ಕರ್ಫ್ಯೂ ವಿಧಿಸಿದ್ದು, ಶನಿವಾರ ವಿಟ್ಲ ಪೇಟೆ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ.

ಅಗತ್ಯ ವಸ್ತುಗಳು ಸೇರಿದಂತೆ ಎಲ್ಲಾ ಅಂಗಡಿಗಳು ಬಂದ್ ಮಾಡುವಂತೆ ಸೂಚಿಸಲಾಗಿತ್ತು. ಅದರಂತೆ ಯಾವುದೇ ಅಂಗಡಿಗಳು ಬಾಗಿಲು ತೆರೆದಿಲ್ಲ. ಜನರು ಪೇಟೆಗೆ ಕಾಲಿಟ್ಟಿಲ್ಲ. ತುರ್ತು ಅವಶ್ಯಕತೆಯಿಂದ ಪೇಟೆಗೆ ತೆರಳುವರಿಗೆ ವಿನಾಯಿತಿ ನೀಡಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಹಾಲಿನ ಅಂಗಡಿ ತೆರೆದಿತ್ತು. ಔಷಧಿ ಅಂಗಡಿ ಮಾತ್ರಗಳು ಎಂದಿನಂತೆ ಕಾರ್ಯಾಚರಿಸಿದೆ. ಸರಿಯಾದ ಕಾರಣ ನೀಡಿದವರಿಗೆ ಮಾತ್ರ ತೆರಳಲು ಅವಕಾಶ ನೀಡಲಾಗಿದೆ.

ಇಂದು ವಿಟ್ಲ ಪೇಟೆಗೆ ಜನರಿಗೆ ಬರುವ ಪ್ರವೇಶ ಸ್ಥಳವಾದ ಬೊಬ್ಬೆಕೇರಿ, ನಾಡಕಚೇರಿ, ಮೇಗಿನಪೇಟೆ, ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ವಿಟ್ಲ ಸಮುದಾಯ ವಿಟ್ಲ ಪೊಲೀಸರು ನಾಕಾಬಂಧಿ ಅಳವಡಿಸಿದ್ದಾರೆ, ಹಾಗೂ ಪೇಟೆಯಲ್ಲಿ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ವಿಟ್ಲ ಪೇಟೆಯು ಸ್ತಬ್ಧಗೊಂಡಿದೆ.

- Advertisement -

Related news

error: Content is protected !!