Saturday, June 13, 2026
spot_imgspot_img
spot_imgspot_img

ಹೆಬ್ರಿ: ಚಾಲಕನ ನಿಯಂತ್ರಣ ತಪ್ಪಿ ಬಸ್ ಮರಕ್ಕೆ ಡಿಕ್ಕಿ: 15 ಮಂದಿ ಪ್ರಯಾಣಿಕರಿಗೆ ಗಾಯ

- Advertisement -
- Advertisement -

ಹೆಬ್ರಿ: ಶಿವಮೊಗ್ಗದಿಂದ ಉಡುಪಿಗೆ ಹೋಗುತ್ತಿದ್ದ ಮಿನಿ ಬಸ್ಸೊಂದು ಹೆಬ್ರಿ ಸಮೀಪ ಕನ್ಯಾನ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರ‌ಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ಸಂಭವಿಸಿದೆ. ಬಸ್‌ ಚಾಲಕ ರಾಘವೇಂದ್ರ ಅವರು ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಹೋಗಿದ್ದು, ಬಸ್‌ ಚಾಲಕನ ನಿಯಂತ್ರಣ ತಪ್ಪಿ ದೊಡ್ಡ ಮರಕ್ಕೆ ಢಿಕ್ಕಿ ಹೊಡೆದಿದೆ.

ಪರಿಣಾಮ ಬಸ್‌ನ ಮುಂದಿನ ಭಾಗವು ಸಂಪೂರ್ಣ ಜಖಂಗೊಂಡಿದ್ದು ನಿರ್ವಾಹಕ ಪುಟ್ಟಸ್ವಾಮಿ ಹಾಗೂ ಬಸ್‌ನಲ್ಲಿದ್ದ ಸುಮಾರು 15 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಪಘಾತದ ಮೊದಲು, ಸ್ವಲ್ಪ ಹಿಂದೆ ಪ್ರಯಾಣಿಕರೋರ್ವರನ್ನು ಹತ್ತಿಸಿದ್ದ ಕಾರಣ ಬಸ್‌ ಸ್ಪಲ್ಪ ನಿಧಾನವಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ ಎಂದು ಪ್ರಯಾಣಿಕರೋರ್ವರು ತಿಳಿಸಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

vtv vitla
- Advertisement -

Related news

error: Content is protected !!