- Advertisement -





- Advertisement -
ಹೆಬ್ರಿ: ವಿದ್ಯಾರ್ಥಿನಿಯೋರ್ವಳು ನಿರ್ಮಾಣ ಹಂತದಲ್ಲಿರುವ ಅವರ ಮನೆಯ ಕೋಣೆಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿ ಹೆಬ್ರಿ ನಿವಾಸಿ ಪೂಜಿತಾ (17 ) ಎಂದು ಗುರುತಿಸಲಾಗಿದೆ.
ಸರಿಯಾಗಿ ಕಾಲೇಜಿಗೆ ಹೋಗುತ್ತಿರಲಿಲ್ಲ. ಯಾವುದೋ ವಿಚಾರದಲ್ಲಿ ಮನನೊಂದು ಮಾನಸಿಕ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜುಗುಪ್ಸೆಗೊಂಡು ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಈ ಘಟನಯ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -