




ಕಾಳುಮೆಣಸಿನಿಂದ ಕಷಾಯ ತಯಾರಿಸಿ ಹೇಗೆ ಶೀತ ಕೆಮ್ಮು ಸಮಸ್ಯೆಯನ್ನು ದೂರ ಮಾಡಿಕೊಳ್ಳುತ್ತಿರೋ ಅದೇ ರೀತಿ ಕಾಳುಮೆಣಸಿನ ಎಲೆಗಳನ್ನು ಕತ್ತರಿಸಿ ಹಾಕಿ ನೀರಿನೊಂದಿಗೆ ಕುದಿಸಿ ಬೆಳಿಗ್ಗೆ ಸಂಜೆ ಸೇವನೆ ಮಾಡುವುದರಿಂದ ಗಂಟಲು ನೋವು ಹಾಗೂ ಶೀತದ ಸಮಸ್ಯೆ ಕಡಿಮೆಯಾಗುತ್ತದೆ.
ಇದರ ಎಲೆಗಳನ್ನು ದೋಸೆ ಕಾವಲಿಯಲ್ಲಿ ಇಟ್ಟು ಬಿಸಿಮಾಡಿ ನೋವಿರುವ ಜಾಗಕ್ಕೆ ಇದರಿಂದ ೧೦ ನಿಮಿಷ ಶಾಖ ಕೊಟ್ಟರೆ ಒಂದೇ ದಿನದಲ್ಲಿ ನೋವು ಕಡಿಮೆಯಾಗುತ್ತದೆ. ಕಾಲು ಸೆಳೆತ, ರಕ್ತ ಹೆಪ್ಪುಗಟ್ಟಿರುವ ಗಾಯಗಳು, ಇಂಜೆಕ್ಷನ್ ಚುಚ್ಚಿದ ಜಾಗದ ನೋವು ಹೀಗೆ ಮಾಡುವುದರಿಂದ ಬಹುಬೇಗ ದೂರವಾಗುತ್ತದೆ
ಕಾಳು ಮೆಣಸನ್ನು ಅರಿಶಿನದೊಂದಿಗೆ ಬೆರೆಸಿ ಸೇವಿಸಿದರೆ ಕ್ಯಾನ್ಸರ್ ಬರುವುದಿಲ್ಲ ಎಂದು ಹೇಳಲಾಗುತ್ತದೆ. ಅರಿಶಿನ ಮತ್ತು ಕರಿಮೆಣಸನ್ನು ಹಾಲಿನಲ್ಲಿ ಬೆರೆಸಿ ಕೂಡ ಸೇವಿಸಬಹುದು. ಈ ಪಾನೀಯವನ್ನು ಸಾಮಾನ್ಯವಾಗಿ ತೀವ್ರವಾದ ಶೀತದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಇದು ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಎ ಮತ್ತು ಕ್ಯಾರೊಟಿನಾಯ್ಡ್‌ಗಳನ್ನು ಒಳಗೊಂಡಿರುತ್ತದೆ. ಇದು ಕ್ಯಾನ್ಸರ್ ಮತ್ತು ಇತರ ಮಾರಣಾಂತಿಕ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ..
ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟಗಳಿಂದ ಹೃದಯಾಘಾತ ಉಂಟಾಗಬಹುದು. ಕಾಳು ಮೆಣಸು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದು ಪೊಟ್ಯಾಸಿಯಮ್ ಅನ್ನು ಒಳಗೊಂಡಿರುತ್ತದೆ, ಇದು ಹೃದಯ ಬಡಿತ ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಾಳು ಮೆಣಸು ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.