Saturday, September 12, 2026
spot_imgspot_img
spot_imgspot_img

ಟೋಲ್‌ ಶುಲ್ಕ ಪರಿಷ್ಕರಣೆ: ಕರಾವಳಿಯಲ್ಲಿ ಏಪ್ರಿಲ್ 1ರಿಂದ ಟೋಲ್‌ ದರ ಏರಿಕೆ!

- Advertisement -
- Advertisement -

ಮಂಗಳೂರು: ಹೆದ್ದಾರಿಗಳ ವಿವಿಧ ಟೋಲ್‌ಗಳಲ್ಲಿ ಶುಲ್ಕ ಪರಿಷ್ಕರಣೆ ಆದೇಶ ಹೊರಡಿಸಲಾಗಿದ್ದು, ಎಪ್ರಿಲ್‌ 1ರಿಂದ ಜಾರಿಗೆ ಬರಲಿವೆ. “ಪರಿಷ್ಕೃತ ಆದೇಶ, ತಲಪಾಡಿ, ಹೆಜಮಾಡಿ ಹಾಗೂ ಸಾಸ್ತಾನ ಟೋಲ್‌‌ ಗೇಟ್‌‌‌‌‌ಗಳಿಗೆ ಅನ್ವಯವಾಗಲಿದೆ. ಬ್ರಹ್ಮರಕೂಟ್ಲು ಹಾಗೂ ಎನ್‌‌ಐಟಿಕೆ ಟೋಲ್‌ಗೇಟ್‌‌‌‌ಗಳಿಗೆ ಪರಿಷ್ಕೃತ ದರಗಳನ್ನು ಎಪ್ರಿಲ್‌ 1ರಂದು ಪ್ರಕಟಿಸಲಾಗುವುದು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಜಮಾಡಿ: ಲಘು ವಾಹನಗಳು – ಇದ್ದ ಏಕ ಮುಖ 35 ರೂ. 40 ರೂ.ಗೆ ಹಾಗೂ ದ್ವಿಮುಖ ದರ 50-60 ರೂ, ಮಾಸಿಕ ಪಾಸ್‌ ಬೆಲೆ 1,145ರಿಂದ 1,280 ರೂ ಏರಿಕೆಯಾಗಿದೆ. ಲಘು ವಾಣಿಜ್ಯ ವಾಹನಗಳು, ಸರಕು ವಾಹನಗಳು, ಮಿನಿ ಬಸ್‌ಗಳು: ಏಕಮುಖ ದರ 55 ರೂನಿಂದ 60 ರೂ., ದ್ವಿಮುಖ 85 ರೂ. ನಿಂದ 95 ರೂ., ಮಾಸಿಕ ಪಾಸ್ 1,850 ರೂ.ನಿಂದ 2,065 ರೂ.

ಟ್ರಕ್‌, ಬಸ್‌ಗಳು: ಏಕಮುಖ 115 ರೂ. ನಿಂದ 130 ರೂ., ದ್ವಿಮುಖ 175 ರೂ. ನಿಂದ 195 ರೂ., ಮಾಸಿಕ ಪಾಸ್‌ ದರ 3,880 ರೂ. ನಿಂದ 4,325 ರೂ., ಸ್ಥಳೀಯರ ಮಾಸಿಕ ಪಾಸ್‌ ಬೆಲೆ 255 ರೂ. ನಿಂದ 285 ರೂ. ತಲಪಾಡಿ: ಲಘು ವಾಹನ – ಏಕಮುಖ ಸಂಚಾರ 40 ರೂ., ದ್ವಿಮುಖ ಸಂಚಾರ 60 ರೂ. ನಿಂದ 65 ರೂ., ಮಾಸಿಕ ಪಾಸ್‌ ದರ 1,400 ರೂ.

ಲಘು ವಾಣಿಜ್ಯ ವಾಹನ, ಮಿನಿ ಬಸ್‌: ಏಕಮುಖ ಸಂಚಾರ 65 ರೂ., ದ್ವಿಮುಖ ಸಂಚಾರ 95 ರೂ., ಮಾಸಿಕ ಪಾಸ್‌ 2,155 ರೂ. ಸಾಸ್ತಾನ: ಲಘು ವಾಹನಗಳು- ಏಕಮುಖ 45 ರೂ., ದ್ವಿಮುಖ 70 ರೂ., ಮಾಸಿಕ ಪಾಸ್‌ 1,505 ರೂ. ನಿಂದ 1,555 ರೂ. ಲಘು ವಾಣಿಜ್ಯ, ಮಿನಿ ಬಸ್‌: ಏಕ ಮುಖ 75 ರೂ., ದ್ವಿಮುಖ 110 ರೂ. ನಿಂದ 115 ರೂ., ಮಾಸಿಕ ಪಾಸ್‌ ದರ 2,430 ರೂ. ನಿಂದ 2,510 ರೂ. ಟ್ರಕ್‌ ಬಸ್‌: ಏಕ ಮುಖ 155 ರೂ. ನಿಂದ 160 ರೂ., ದ್ವಿಮುಖ ಸಂಚಾರ 230 ರೂ.ನಿಂದ 235 ರೂ., ಮಾಸಿಕ ಪಾಸ್‌ 5,095 ರೂ.ನಿಂದ 5,260 ರೂ., ಸ್ಥಳೀಯರ ಮಾಸಿಕ ಪಾಸ್ ದರ 275 ರೂ. ನಿಂದ 285 ರೂ. ಗೆ ಹೆಚ್ಚಿಸಲಾಗಿದೆ.

driving
- Advertisement -

Related news

error: Content is protected !!