Thursday, June 18, 2026
spot_imgspot_img
spot_imgspot_img

ಪುತ್ತೂರು: ಅಜಿತ್ ರೈ ಹೊಸಮನೆಯನ್ನು ತಳ್ಳಿ ಹೊರ ಹಾಕಿದ ಹಿಂದೂ ಕಾರ್ಯಕರ್ತರು

- Advertisement -
- Advertisement -

ಪುತ್ತೂರು: ಬ್ಯಾನರ್ ಅಳವಡಿಕೆ ನಂತರ ಪುತ್ತೂರಿನಲ್ಲಿ ಹೈಡ್ರಾಮವೇ ನಡೆಯುತ್ತಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ಮಾಡಿದ್ದು ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ಪುತ್ತೂರಿನ ಈ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿದ್ದು ಇಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಪುತ್ತೂರಿಗೆ ಆಗಮಿಸಿದ್ದಾರೆ. ಅರುಣ್ ಕುಮಾರ್‍ ಪುತ್ತಿಲ ಅವರೊಂದಿಗೆ ಹಲ್ಲೆಗೊಳಗಾದವರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಈ ನಡುವೆ ಬಿಜೆಪಿಯ ಅಜಿತ್ ರೈ ಹೊಸಮನೆಯನ್ನು ಹಿಂದೂ ಕಾರ್ಯಕರ್ತರು ತಳ್ಳಿ ಹೊರಹಾಕಿದ ಘಟನೆ ನಡೆದಿದೆ.

ಈ ಹಿಂದೆ ಹಿಂದೂ ಜಾಗರಣ ವೇದಿಕೆಯಲ್ಲಿ ಗುರುತಿಸಿಕೊಂಡಿರುವ ಅಜಿತ್ ರೈ ಹೊಸಮನೆ, ಫೋಟೊ ಕ್ಲಿಕ್ಕಿಸಲೆಂದು ಒಳಬಂದಿದ್ದಾರೆ. ಈ ವೇಳೆ ಆಕ್ರೋಶಗೊಂಡ ಹಿಂದೂ ಕಾಯಕರ್ತರು ತಡೆದು ತಳ್ಳಿ ಹೊರ ಹಾಕಿದ್ದಾರೆ. ಈ ಹಿಂದೆ ಪುತ್ತೂರಿನಲ್ಲಿ ಆದ ಬೆಳವಣಿಗೆಯನ್ನು ಜೊತೆಯಲ್ಲೇ ಇದ್ದುಕೊಂಡು ಪ್ರತಿಯೊಂದು ಮಾಹಿತಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್‌ ಕಟೀಲ್ ಅವರಿಗೆ ರವಾನಿಸಿದ್ದಾರೆ ಎಂಬ ಅನುಮಾನದಿಂದ ಆಕ್ರೋಶಗೊಂಡ ಹಿಂದೂ ಕಾರ್ಯಕರ್ತರು ಹೊರ ಹಾಕಿದ್ದಾರೆ. ಅಜಿತ್ ರೈ ಒಬ್ಬ ನಕಲಿ ಹಿಂದೂ ಮತ್ತು ಸ್ವಾರ್ಥಿ ಎಂಬುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

- Advertisement -

Related news

error: Content is protected !!