Friday, April 26, 2024
spot_imgspot_img
spot_imgspot_img

ಹಿಂದೂ ಧರ್ಮ ಅಂದರೆ ಅದು ಬ್ರಾಹ್ಮಣ ಧರ್ಮವೇ ಹೊರತು ಬೇರೆಯವರ ಧರ್ಮವಲ್ಲ: ಪ್ರೊ.ಕೆ.ಎಸ್‍. ಭಗವಾನ್.

- Advertisement -G L Acharya panikkar
- Advertisement -

ಮೈಸೂರು: ಬ್ರಾಹ್ಮಣರನ್ನು ಬ್ರಾಹ್ಮಣರೆಂದು, ಕ್ಷತ್ರಿಯರನ್ನು ಕ್ಷತ್ರಿಯರೆಂದು, ವೈಶ‍್ಯರನ್ನು ವೈಶ‍್ಯರೆಂದು ಕರೆದರೆ ಅವರು ಯಾರು ಸಹ ಬೇಸರ ಮಾಡಿಕೊಳ್ಳುವುದಿಲ್ಲ. ಆದರೆ, ಶೂದ್ರರನ್ನು ಶೂದ್ರರು ಎಂದು ಕರೆದರೆ ಅವರು ಏತಕ್ಕೆ ಬೇಸರ ಮಾಡಿಕೊಳ್ಳುತ್ತಾರೆ ಎಂದು ಸಂಸದೆ ಪ್ರಜ್ಞಾ ಠಾಕೂರ್ ಪ್ರಶ್ನಿಸಿದ್ದಾರೆ. ಈ ರೀತಿಯ ಹೇಳಿಕೆ ನೀಡಿರುವ ಅವರಿಗೆ ಹಿಂದೂ ಧರ್ಮದ ಕುರಿತು ಅರಿವು ಇಲ್ಲ ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್‍. ಭಗವಾನ್ ಟೀಕಿಸಿದ್ದಾರೆ.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮದ ಬಗ್ಗೆ ಪ್ರಜ್ಞಾ ಠಾಕೂರ್ ಅವರಿಗೆ ಏನೂ ಗೊತ್ತಿಲ್ಲ. ಪ್ರಜ್ಞಾ ಠಾಕೂರ್ ಅವರಿಗೆ ನಾಲ್ಕು ವರ್ಣಗಳ ಕುರಿತು ಮಾತ್ರ ಗೊತ್ತಿದೆ. ಆದರೆ, ನಾಲ್ಕನೇ ವರ್ಣ (ಶೂದ್ರ)ದವರ ಸ್ಥಾನಮಾನ ಏನು ಎಂಬುದು ಅವರಿಗೆ ಗೊತ್ತಿಲ್ಲ. ಈ ಶೂದ್ರರನ್ನು ಮನುಸ್ಮೃತಿಯಲ್ಲಿ ಬ್ರಾಹ್ಮಣರ ಗುಲಾಮರೆಂದು ಕರೆಯಲಾಗಿದೆ. ಅಲ್ಲದೆ ಶೂದ್ರ ಅಂದರೆ ಸೂಳೆಮಗ, ಹಾದರಕ್ಕೆ ಹುಟ್ಟಿದವನು ಎಂದು ಕರೆಯಲಾಗಿದೆ. ಹೀಗಾಗಿ ಸ್ವಾಭಿಮಾನಿಗಳಾದವರೆಲ್ಲರೂ ಈ ಶೂದ್ರ ಪದವನ್ನು ತಿರಸ್ಕರಿಸುತ್ತಾರೆ. ಇದೇ ಕಾರಣಕ್ಕೆ ಪೆರಿಯಾರ್ ರಾಮಸ್ವಾಮಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟು ಹಾಕಿದ್ದರು ಎಂದು ಹೇಳಿದರು.

ಹಿಂದೂ ಧರ್ಮ ಅಂದರೆ ಬ್ರಾಹ್ಮಣ ಧರ್ಮವೇ ಹೊರತು ಉಳಿದವರ ಧರ್ಮವಲ್ಲ. ಆ ಧರ್ಮದಲ್ಲಿ ಬ್ರಾಹ್ಮಣರು ಮೇಲು ಉಳಿದವರೆಲ್ಲ ಕೀಳು ಅಂತ ಹೇಳುತ್ತಾರೆ. ಹಾಗಾಗಿ ಸ್ವಾಭಿಮಾನಿಗಳು ಯಾರು ಕೂಡ ಆ ಧರ್ಮವವನ್ನು ಒಪ್ಪುವುದಿಲ್ಲ. ಹಿಂದುಳಿದ ವರ್ಗದವರು ಈ ವಿಚಾರದಲ್ಲಿ ಇನ್ನೂ ಜಾಗೃತರಾಗಿಲ್ಲ. ಏಕೆಂದರೆ ಅವರಿಗೆಲ್ಲ ಅಪಾಯಕಾರಿಯಾದ ದೇವರುಗಳನ್ನು ಕೊಟ್ಟುಬಿಟ್ಟಿದ್ದಾರೆ. ಆ ದೇವರುಗಳಿಗೆ ಈ ಚಾತುರ್ವಣವನ್ನು ರಕ್ಷಣೆ ಮಾಡುವುದೇ ಕೆಲಸ. ಚಾರ್ತುವರ್ಣ ವನ್ನು ನಾನೇ ಸೃಷ್ಟಿ ಮಾಡಿದೆ ಎಂದು ಕೃಷ್ಣ ಹೇಳುತ್ತಾನೆ. ಚಾತುರ್ವಣ ರಕ್ಷಣೆಗೆ ಇರುವವನು ನಾನು ಎಂದು ರಾಮ ಹೇಳುತ್ತಾನೆ. ಈ ವಿಚಾರವನ್ನು ನಾನು ಹೇಳುತ್ತಿಲ್ಲ. ಮನುಸ್ಮೃತಿ, ರಾಮಾಯಣಗಳಲ್ಲಿ ಇದರ ಉಲ್ಲೇಖವಿದೆ. ಅದನ್ನು ಎಲ್ಲರು ಓದಬೇಕು. ಮನುಸ್ಮೃತಿ, ಧರ್ಮಗ್ರಂಥಗಳಲ್ಲಿ ಇರುವ ವಿಚಾರವನ್ನೇ ನಾನು ಹೇಳುತ್ತಿದ್ದೇನೆ. ಆದರೆ, ಯಾರು ಕೂಡ ಧರ್ಮಗ್ರಂಥಗಳನ್ನು ಅಧ್ಯಯನ ಮಾಡದೆ ನಾನು ಹೇಳಿಕೆ ನೀಡಿದ ತಕ್ಷಣ ನನಗೆ ಹೊಡೆಯಲು ಬರುತ್ತಾರೆ. ನನಗೆ ಹೊಡೆಯಲು ಬರುವವರು ಮೊದಲು ಧರ್ಮ ಗ್ರಂಥಗಳನ್ನು ಅಧ್ಯಯನ ಮಾಡಿ ಧರ್ಮದ ಸಾರವನ್ನು ಅರಿತುಕೊಳ‍್ಳಲಿ ಎಂದು ಹೇಳಿದರು.

ಜನರು ಎಲ್ಲದಕ್ಕೂ ಪಂಚಾಂಗ ಕೇಳುತ್ತಾರೆ. ಪಂಚಾಂಗ ಹಾಗೂ ಜ್ಯೋತಿಷ್ಯಗಳು ಕರೊನಾ ಬರುವ ವಿಚಾರವನ್ನೇ ಹೇಳಲಿಲ್ಲ. ಆ ಸಂದರ್ಭ ಯಾವ ದೇವರು ಕೂಡ ನಿಮ್ಮ ರಕ್ಷಣೆ ಬರಲಿಲ್ಲ. ಕರೊನಾ ಬಂತು ಎಂದು ಎಲ್ಲ ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಬಾಗಿಲು ಹಾಕಲಾಯಿತು. ಜನರು ಮೌಢ್ಯವನ್ನುಬಿಟ್ಟುವಿಚಾರವಂತರಾಗಬೇಕೆಂದು ಹೇಳಿದರು.

- Advertisement -

Related news

error: Content is protected !!