- Advertisement -
- Advertisement -
ಮಂಗಳೂರು:-ನೇತ್ರಾವತಿ ಸೇತುವೆಯಲ್ಲಿ ಸ್ಕೂಟರ್ ಗೆ ಕಾರು ಢಿಕ್ಕಿ ಹೊಡೆದು ಸಿಮೆಂಟ್ ಲಾರಿಯಡಿಗೆ ಸಿಲುಕಿ ಸ್ಕೂಟರ್ ಸವಾರ ಸಾವು.ನೇತ್ರಾವತಿ ಸೇತುವೆಯಲ್ಲಿ ಸ್ಕೂಟರ್ ಸವಾರರನ್ನು ಹಿಟ್ & ರನ್ ಮಾಡಿ ಕಾರ್ ಪರಾರಿಯಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸಾರ್ವಜನಿಕರು ಸಿನಿಮೀಯ ಶೈಲಿಯಲ್ಲಿ ಕಾರನ್ನು ಬೆನ್ನಟ್ಟಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಲ್ಲಿ ಹಿಡಿದಿಟ್ಟಿದ್ದಾರೆ.ಹಿಟ್ & ರನ್ ಮಾಡಿದ ಕಾರು ಪೊಲೀಸರ ವಶಕ್ಕೆ.ಹಾಗು ಉಳ್ಳಾಲ ಬಂಡಿಕೊಟ್ಯ ನಿವಾಸಿ ಉಬೇದ್ 28 ದುರ್ಮರಣ ವಾಗಿದ್ದರೆ.
ಜುಲೈ 23 ರಂದು ಉಬೇದ್ ಗೆ ಮದುವೆ ನಿಶ್ಚಯವಾಗಿತ್ತು.ಸಹಸವಾರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಹಿಟ್ ಆಂಡ್ ರನ್ ಮಾಡಿದ ಕಾರನ್ನು ಸಾರ್ವಜನಿಕರೇ ಹಿಡಿದು ಕೊಟ್ಟು ಪರಿಣಾಮ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.ಹಿಟ್ & ರನ್ ಮಾಡಿದ ಸೋಮೇಶ್ವರ ಪುರಸಭಾ ವ್ಯವಸ್ಥಾಪಕ ಕೃಷ್ಣ ಸೇರಿ ಇಬ್ಬರು ಪೊಲೀಸರ ವಶಕ್ಕೆ.ಹಾಗೂ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -