Monday, July 27, 2026
spot_imgspot_img
spot_imgspot_img

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಡಿ ಶೆಟ್ಟಿಯವರಿಗೆ ವಿಟ್ಲ ವಲಯ ಬಂಟರ ಸಂಘದ ವತಿಯಿಂದ ಸನ್ಮಾನ.

- Advertisement -
- Advertisement -

ವಿಟ್ಲ: 2020ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕುಸುಮೋದರ ದೇರಣ್ಣ ಶೆಟ್ಟಿಯವರನ್ನು 11 ಗ್ರಾಮಗಳ ವಿಟ್ಲ ವಲಯ ಬಂಟರ ಸಂಘದ ವತಿಯಿಂದ ಕೇಪು ಶ್ರೀ ಸುಬ್ರಾಯ ದೇವಸ್ಥಾನದ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಮಾಣಿಲ ಶ್ರೀ ಮೋಹನ ದಾಸ ಸ್ವಾಮೀಜಿ ಉಪಸ್ಥಿತರಿದ್ದರು. ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ
ಬಂಟ್ವಾಳ ಬಂಟರ ಸಂಘದ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ವಿಟ್ಲ ವಲಯದ ಬಂಟರ ಸಂಘದ ಗೌರವಾಧ್ಯಕ್ಷರಾದ ರಂಗೋಲಿ ರಾಜಾರಾಮ ಶೆಟ್ಟಿ, ವಿಟ್ಲ ವಲಯದ ಬಂಟರ ಸಂಘದ ಅಧ್ಯಕ್ಷರು ರಾಧಾಕೃಷ್ಣ ಶೆಟ್ಟಿ, ಕೇಪು ಬಂಟರ ಸಂಘದ ಅಧ್ಯಕ್ಷರು ಜಗಜ್ಜೀವನ್ ರಾಮ್ ಶೆಟ್ಟಿ, ಉಪಸ್ಥಿತರಿದ್ದರು.


ಈ ಕಾರ್ಯಕ್ರಮದಲ್ಲಿ ಉಳ್ಳಾಲ್ತಿ ಸೇವಾ ಟ್ರಸ್ಟ್ ಕೇಪು, ಗೋಪಾಲಕೃಷ್ಣ ದೇವಸ್ಥಾನ ಪೆರುವಾಯಿಯ ಆಡಳಿತ ಮಂಡಳಿ ಹಾಗೂ ಕುಂಡಕೋಳಿ ಮನೆತನದಿಂದ ಮತ್ತು ಸುಬ್ರಾಯ ದೇವಸ್ಥಾನ ಮತ್ತು ಪ್ರಸಾದ್ ನೇತ್ರಾಲಯ ಹಾಗೂ ನಿತ್ಯಾನಂದ ಮಂದಿರದಿಂದ ಕೆ.ಡಿ ಶೆಟ್ಟಿರವರನ್ನು ಸನ್ಮಾನಿಸಲಾಯಿತು.

- Advertisement -

Related news

error: Content is protected !!