- Advertisement -
- Advertisement -
ವಿಟ್ಲ : ಕನ್ನಡ ರಾಜ್ಯ ಪ್ರಶಸ್ತಿ ಗೆ ಆಯ್ಕೆಯಾಗಿರುವಂತಹ ವಿಟ್ಲ ಚೆಲ್ಲಡ್ಕದ ಕುಸುಮೋದರ ದೇರಣ್ಣ ಶೆಟ್ಟಿ ಇವರು ಕೇಪು ದೇವಸ್ಥಾನ ಮತ್ತು ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲಕ್ಕೆ ಭೇಟಿ ನೀಡಿದರು.


ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ ಇವರನ್ನು ವಿಟ್ಲ ಅರಮನೆಯ ಪ್ರತಿನಿಧಿ ಕೃಷ್ಣಯ್ಯ ಬಲ್ಲಾಳ್ ರವರ ನೇತೃತ್ವದಲ್ಲಿ ಕೇಪು ದೇವಸ್ಥಾನದ ಪ್ರಧಾನ ಅರ್ಚಕರಾದ ಪುರೋಹಿತ ರತ್ನ ಸೂರ್ಯನಾರಾಯಣ ಕೇಕುಣ್ಣಾಯ ಅವರಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರಾಧಕೃಷ್ಣ ಶೆಟ್ಟಿ ಚೆಲ್ಲಡ್ಕ ,ಸುರೇಶ್ ಶೆಟ್ಟಿ ಪಡಿಬಾಗಿಲು, ವಿನೋದ ಆಳ್ವ ಚೆಲ್ಲಡ್ಕ,ಹಾಗು ಅನೇಕ ಭಕ್ತರು ಉಪಸ್ಥಿತರಿದ್ದರು.

- Advertisement -