Monday, July 27, 2026
spot_imgspot_img
spot_imgspot_img

ಸಾಲ ಪಡೆದು ಬ್ಯಾಂಕ್‌ನಿಂದ ಹೊರಬರುವ ಮುನ್ನವೇ ಹಣ ದೋಚಿದ ಸೈಬರ್‌ ವಂಚಕರು!

- Advertisement -
- Advertisement -

ಚಿಕ್ಕಮಗಳೂರು: ಚಿನ್ನ ಅಡವಿಟ್ಟು ಪಡೆದ ಸಾಲ ಬ್ಯಾಂಕ್‌ ಖಾತೆಗೆ ಜಮೆಯಾದ ಒಂದೇ ಕ್ಷಣದಲ್ಲಿ ಸೈಬರ್‌ ವಂಚಕರು ಹಣ ಎಗರಿಸಿದ ಪ್ರಕರಣ ಚಿಕ್ಕಮಗಳೂರಲ್ಲಿ ನಡೆದಿದೆ.

ನಗರದ ವಕೀಲರೊಬ್ಬರು ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟು 4.14 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಪಡೆದು ಬ್ಯಾಂಕ್‌ನಿಂದ ಹೊರಬರುವ ಮುನ್ನವೇ ಅವರ ಖಾತೆಯಿಂದ 99,584 ರೂ. ಹಣವನ್ನು ಸೈಬರ್‌ ವಂಚಕರು ಎಗರಿಸಿದ್ದಾರೆ. ಓಟಿಪಿ ಬಂದಿಲ್ಲ, ಎಪಿಕೆ ಲಿಂಕ್ ಕೂಡ ಬಂದಿಲ್ಲ ಹಣ ಮಾತ್ರ ಕಳ್ಳರ ಪಾಲಾಗಿದೆ.

ಅಮೆಜಾನ್ ಪೇ ಮೂಲಕ ವಂಚಕರು ಹಣ ಎಗರಿಸಿದ್ದಾರೆ. ಹಣ ಕಳೆದುಕೊಂಡ ವಕೀಲ ಚಿಕ್ಕಮಗಳೂರು ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!