Saturday, June 27, 2026
spot_imgspot_img
spot_imgspot_img

ಪ್ರಿಯಕರನೊಂದಿಗೆ ಎಸ್ಕೇಪ್ ಆದ ಮಾಜಿ ಕಾರ್ಪೋರೇಟರ್ ಪುತ್ರಿ; ಪತ್ತೆ ಹಚ್ಚಿ ವಾಪಾಸ್ಸು ಕರೆತಂದ ಪೊಲೀಸರು!

- Advertisement -
- Advertisement -

ಹುಬ್ಬಳ್ಳಿ: ಪ್ರಿಯಕರನೊಂದಿಗೆ ಓಡಿಹೋಗಿದ್ದ ಹುಬ್ಬಳ್ಳಿಯ ಮಾಜಿ ಕಾರ್ಪೋರೇಟರ್ ಪುತ್ರಿಯನ್ನು ಪತ್ತೆಹಚ್ಚುವಲ್ಲಿ ನಿರತರಾಗಿದ್ದ ಪೊಲೀಸರು ಕೊನೆಗೂ ಇಬ್ಬರನ್ನು ಹುಡುಕಿ ವಾಪಸ್ಸು ಕರೆತಂದಿದ್ದಾರೆ.

ಪೊಲೀಸರು ಮೂರ್ನಾಲ್ಕು ಜಿಲ್ಲೆಗಳಲ್ಲಿ ಪ್ರೇಮಿಗಳಿಗಾಗಿ ಹುಡುಕಾಡಿದ್ದರು. ಕೊನೆಗೆ ಗದಗ ಜಿಲ್ಲೆಯಲ್ಲಿ ಪ್ರೇಮಿಗಳನ್ನು ಪತ್ತೆಹಚ್ಚಿದ್ದಾರೆ. ಮಾಜಿ ಕಾರ್ಪೋರೇಟರ್ ರಾಜಣ್ಣ ಕೊರವಿ ಅವರ ಪುತ್ರಿ ಮೊನಾಲ್, ಪ್ರಿಯಕರ ರಾಹುಲ್ ಜತೆ ಓಡಿಹೋಗಿದ್ದಳು.

6 ಇನ್ಸ್​ಪೆಕ್ಟರ್​ ನೇತೃತ್ವದಲ್ಲಿ ತಂಡ ರಚಿಸಿ, ಯುವತಿ ಹಾಗು ಆಕೆಯ ಪ್ರಿಯಕರನ ಶೋಧಕ್ಕಾಗಿ ಫೀಲ್ಡಿಗಿಳಿದಿದ್ದು, ಗದಗಿನಲ್ಲಿ ಪತ್ತೆಹಚ್ಚಿ ತಡರಾತ್ರಿ ಪ್ರೇಮಿಗಳನ್ನು ಹುಬ್ಬಳ್ಳಿಯ ವಿದ್ಯಾನಗರ ಠಾಣೆಗೆ ಕರೆತಂದಿದ್ದಾರೆ. ಮೋನಾಲ್ ಹಾಗೂ ರಾಹುಲ್ ಪರಸ್ಪರ ಐದು ವರ್ಷದಿಂದ ಪ್ರೀತಿಸುತ್ತಿದ್ದರು. ಮಗಳ ಪ್ರೇಮಕ್ಕೆ ಮಾಜಿ ಕಾರ್ಪೋರೇಟರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!