Friday, June 19, 2026
spot_imgspot_img
spot_imgspot_img

ಹೆಂಡತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ..!

- Advertisement -
- Advertisement -

ಪತಿಯೋರ್ವ ಹೆಂಡತಿ ಮೇಲೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಕದಿರೇನಹಳ್ಳಿಯಲ್ಲಿ ನಡೆದಿದೆ.

ಪೆಟ್ರೋಲ್ ಸುರಿದ ವ್ಯಕ್ತಿ ಶ್ರೀನಿವಾಸ್ ಹಾಗೂ ಪತ್ನಿ ಪುಷ್ಪಮ್ಮ ಎಂದು ಗುರುತಿಸಲಾಗಿದೆ.

ಶ್ರೀನಿವಾಸ್​ ಮತ್ತು ಪುಷ್ಪಮ್ಮ ವಿವಾಹವಾಗಿ 18 ವರ್ಷ ಕಳೆದಿದ್ದು, ಶ್ರೀನಿವಾಸ್ ಪ್ಲಂಬರ್ ಕೆಲಸ ಮಾಡಿಕೊಂಡಿದ್ದನು. ಪತ್ನಿಯ ಶೀಲ ಶಂಕಿಸಿ ಆಗಾಗ ಗಲಾಟೆ ಮಾಡುತ್ತಿದ್ದನು. ಈ ಬಗ್ಗೆ ಹಿರಿಯರು ಅನೇಕ ಬಾರಿ ರಾಜಿ ಪಂಚಾಯಿತಿ ಮಾಡಿದ್ದರು. ಶ್ರೀನಿವಾಸ್ ಪತ್ನಿ ಮೇಲೆ ಅನುಮಾನಗೊಂಡು ಮತ್ತೆ ಜಗಳ ತೆಗೆದಿದ್ದಾನೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ಗಾಬರಿಯಿಂದ ಪತ್ನಿ ಮೇಲೆ ನೀರು ಸುರಿದಿದ್ದಾನೆ. ಸದ್ಯ ಪುಷ್ಪಮ್ಮನನ್ನು ವಿಕ್ಟೋರಿಯಾ ಆಸ್ಪತ್ರೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಶ್ರೀನಿವಾಸ್​ನನ್ನು ಬನಶಂಕರಿ ಠಾಣಾ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

- Advertisement -

Related news

error: Content is protected !!