Friday, April 26, 2024
spot_imgspot_img
spot_imgspot_img

ಆರೋಗ್ಯವನ್ನು ಸತ್ಕರ್ಮಗಳಿಗೆ ವಿನಿಯೋಗಿಸಿರಿ : ಇಬ್ರಾಹಿಂ ಸಅದಿ ಮಾಣಿ

- Advertisement -G L Acharya panikkar
- Advertisement -

ಮಾಣಿ : ಯೌವ್ವನ ಮತ್ತು ಆರೋಗ್ಯ ಬಹುಕಾಲ ಬಾಳಿಕೆ ಬರುವಂತಹದ್ದು ಅಲ್ಲ,ಆ ಸಮಯದಲ್ಲಿ ಸೃಷ್ಟಿಕರ್ತನ ಭಯವಿಲ್ಲದೆ ಬೇಕಾಬಿಟ್ಟಿ ಅಹಂಕಾರಿಯಾಗಿ ಜೀವಿಸಿದಾಗ ಮಾರಕರೋಗಗಳು ವಿಪತ್ತುಗಳು ನಮ್ಮನ್ನು ಆವರಿಸುತ್ತದೆ ಆದ್ದರಿಂದ ಆರೋಗ್ಯವಂತರಾಗಿದ್ದಾಗ ಆ ಸಮಯವನ್ನು ಸತ್ಕರ್ಮಗಳಿಗೆ ವಿನಿಯೋಗಿಸಿರಿ ಮತ್ತು ಸಜ್ಜನರೊಂದಿಗಿನ ಸಂಪರ್ಕವನ್ನು ಹೆಚ್ಚಿಸಿರಿ ಎಂದು ಎಸ್‌ವೈಎಸ್ ಮಾಣಿ ಸೆಂಟರ್ ಅಧ್ಯಕ್ಷ ಇಬ್ರಾಹಿಂ ಸಅದಿ ಮಾಣಿ ಹೇಳಿದರು.

ಅವರು ಮಾಣಿ ಪಟ್ಲಕೋಡಿ ಅಬ್ಬಾಸ್‌ರವರ ನಿವಾಸದಲ್ಲಿ ನಡೆದ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈಎಸ್ ಸೂರಿಕುಮೇರು ಬ್ರಾಂಚ್ ಕಮಿಟಿ ಇದರ Count-20 ಎಂಬ ವಾರ್ಷಿಕ ಕೌನ್ಸಿಲ್ ಕಾರ್ಯಕ್ರಮದಲ್ಲಿ ಸಂಘಟನಾ ತರಗತಿ ನಡೆಸಿ ಮಾತನಾಡಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಣಿ ದಾರುಲ್ ಇರ್ಶಾದ್ ಖತೀಬ್ ನಝೀರ್ ಅಮ್ಜದಿ ಸರಳಿಕಟ್ಟೆ ಸತ್ಕಾರ್ಯಗಳಿಗೆ ವ್ಯಯಿಸಲು ಹಿಂದೇಟು ಹಾಕಬಾರದು ಅವು ಪರಲೋಕದಲ್ಲಿ ಬಹಳ ಪುಣ್ಯ ಪ್ರತಿಫಲದೊಂದಿಗೆ ನಮಗೇ ಸಿಗುವುದರೊಂದಿಗೆ ಇಹಲೋಕದಲ್ಲಿ ಬರುವ ಸರ್ವ ಆಪತ್ತುಗಳನ್ನು ದೂರೀಕರಿಸಲಿದೆ ಎಂದು ಹೇಳಿದರು.

ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಸಲೀಂ ಮಾಣಿ ಸ್ವಾಗತಿಸಿ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿ ಸಭೆಯ ಅನುಮೋದನೆ ಪಡೆದರು,ಚುನಾವಣಾ ವೀಕ್ಷಕರಾಗಿ ಮಾಣಿ ಸೆಂಟರ್ ನಾಯಕರಾದ ಹೈದರ್ ಸಖಾಫಿ ಶೇರಾ,ಯಾಕೂಬ್ ನಚ್ಚಬೆಟ್ಟು,ಹಬೀಬ್ ಶೇರಾ ಕಾರ್ಯ ನಿರ್ವಹಿಸಿದರು,ಮಾಣಿ ಸೆಂಟರ್‌ಗೆ ಕೌನ್ಸಿಲರ್ ಗಳಾಗಿ ಹನೀಫ್ ಸಂಕ ಹಾಗೂ ಅಬ್ಬಾಸ್ ಪಟ್ಲಕೋಡಿ ಎಂಬವರನ್ನು ಸೇರ್ಪಡೆಗೊಳಿಸಲಾಯಿತು.

ಹೈದರ್ ಸಖಾಫಿ ಶೇರಾ ಪ್ರಾಸ್ತಾವಿಕ ಭಾಷಣ ಮಾಡಿದರು,ಅದಕ್ಕೂ ಮೊದಲು ಎಸ್ಸೆಸ್ಸೆಫ್ ಸೂರಿಕುಮೇರು ಹಾಗೂ ಎಸ್‌ವೈಎಸ್ ಸೂರಿಕುಮೇರು ಇದರ ಮಾಸಿಕ ಮಹ್‌ಳರತುಲ್ ಬದ್ರಿಯಾ ಮಜ್ಲಿಸ್ ನಡೆಸಲಾಯಿತು ಅದರ ನೇತೃತ್ವವನ್ನು ಕುಟ್ಯಾಡಿ ಸಿರಾಜುಲ್ ಹುದಾ ವಿದ್ಯಾರ್ಥಿ ಇಸಾಕ್ ಮಾಣಿ ವಹಿಸಿದ್ದರು, ಕಾರ್ಯಕ್ರಮದಲ್ಲಿ ಎಸ್‌ವೈಎಸ್ ಮಾಣಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ, ಸೆಂಟರ್ ಲೀಡರ್ ಸುಲೈಮಾನ್ ಸೂರಿಕುಮೇರು, ಹಾಜಿ ಯೂಸುಫ್ ಸೂರಿಕುಮೇರು, ಇಬ್ರಾಹಿಂ ಮುಸ್ಲಿಯಾರ್ ಹಳೀರ,ಉಮ್ಮರ್ ಫಾರೂಕ್ ಸೂರಿಕುಮೇರು, ಅಬ್ದುಲ್ ಕರೀಂ ಸೂರಿಕುಮೇರು,ಹಂಝ ಸೂರಿಕುಮೇರು,ಹಮೀದ್ ಮಾಣಿ,ಮುಂತಾದ ಗಣ್ಯರು ಉಪಸ್ಥಿತರಿದ್ದರು ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.

- Advertisement -

Related news

error: Content is protected !!