Saturday, April 27, 2024
spot_imgspot_img
spot_imgspot_img

ಐಸಿಸ್ ಪಿತೂರಿ ಪ್ರಕರಣ 15 ದೋಷಿಗಳಿಗೆ ಶಿಕ್ಷೆ

- Advertisement -G L Acharya panikkar
- Advertisement -

ನವದೆಹಲಿ: ಐಸಿಸ್ ಪಿತೂರಿ ಪ್ರಕರಣದ 15 ದೋಷಿಗಳಿಗೆ ದೆಹಲಿಯ ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ನ್ಯಾಯಾಲಯ 5ರಿಂದ 10 ವರ್ಷಗಳವರೆಗೆ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 38.000 ರೂ. ನಿಂದ 1.3 ಲಕ್ಷ ರೂ. ವರೆಗೆ ದಂಡ ವಿಧಿಸಿದೆ.

ಸಿರಿಯಾ ಮೂಲದ ಐಸಿಸ್ ಮಾಧ್ಯಮ ವರಿಷ್ಠ ಯೂಸುಫ್-ಅಲ್-ಹಿಂದಿ ಭಯೋತ್ಪಾದನೆ ಸಂಘಟನೆಗಾಗಿ ಕೆಲಸ ಮಾಡಲು ಹಾಗೂ ಭಾರತದಲ್ಲಿ ಭಯೋತ್ಪಾದನಾ ಕೃತ್ಯ ನಡೆಸಲು ಭಾರತೀಯ ಮುಸ್ಲಿಮರನ್ನು ನೇಮಕಗೊಳಿಸಲು ಪಿತೂರಿ ನಡೆದಿತ್ತು. ಐಸಿಸ್ ಪಿತೂರಿ ಪ್ರಕರಣದ 15 ಮಂದಿ ದೋಷಿಗಳಿಗೆ ದೆಹಲಿ ನ್ಯಾಯಾಲಯ ಶುಕ್ರವಾರ ಶಿಕ್ಷೆ ಘೋಷಿಸಿತು ಎಂದು ಎನ್‌ಐಎಯ ವಕ್ತಾರರು ತಿಳಿಸಿದ್ದಾರೆ.

ಐಎಸ್‌ಐಎಸ್ ನಡೆಸಿದ ಪಿತೂರಿ ಆರೋಪದಲ್ಲಿ ಎನ್‌ಐಎ 2015 ಡಿಸೆಂಬರ್ 9ರಂದು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ತನಿಖೆಯ ಸಂದರ್ಭ ದೇಶಾದ್ಯಂತದ ವಿವಿಧ ನಗರಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು ಹಾಗೂ 19 ಆರೋಪಿಗಳನ್ನು ಬಂಧಿಸಲಾಗಿತ್ತು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!