Monday, June 22, 2026
spot_imgspot_img
spot_imgspot_img

ಕಡಬ : ಜಮೀನಿಗೆ ಅಕ್ರಮ ಪ್ರವೇಶ ಮಾಡಿ ತಂತಿಬೇಲಿ ಹಾಗೂ ತಡೆಗೋಡೆ ಧ್ವಂಸ : ಪ್ರಕರಣ ದಾಖಲು

- Advertisement -
- Advertisement -

ಕಡಬ : ಜಮೀನಿಗೆ ಅಕ್ರಮ ಪ್ರವೇಶಗೈದು ತಂತಿಬೇಲಿ ಹಾಗೂ ತಡೆಗೋಡೆ ಧ್ವಂಸಗೈದ ಘಟನೆ ದೇವರಹಳ್ಳಿ ಏನೇಕಲ್ಲು ಗ್ರಾಮದಲ್ಲಿ ನಡೆದಿದೆ.

ಏನೆಕಲ್ಲು ಗ್ರಾಮದ ನಿವಾಸಿ ರಜನಿರವರ ಏನೆಕಲ್ಲು ಗ್ರಾಮದಲ್ಲಿರುವ ಜಮೀನಿಗೆ ಗುರುವಾರ ಸಂಜೆ ಆರೋಪಿಗಳಾದ ರಾಮಣ್ಣ ಗೌಡ ಹಾಗೂ ಯದುಚಂದ್ರ ಎಂಬವರು ಅಕ್ರಮ ಪ್ರವೇಶಗೈದು, ಜಾಗದಲ್ಲಿದ್ದ ತಂತಿಬೇಲಿ ಹಾಗೂ ತಡೆಗೊಡೆಗಳನ್ನು ಜೆಸಿಬಿ ಮೂಲಕ ಬಲಾತ್ಕಾರವಾಗಿ ಧ್ವಂಸಗೊಳಿಸಿ, ಜೀವ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 25/2024 ಕಲಂ 447, 506 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!