ಅನೇಕ ಗಂಭೀರ ಪ್ರಕರಣಗಳ ಆರೋಪಿ ನಟೋರಿಯಸ್ ರೌಡಿ ನಜೀಮ್ @ ನಜ್ಜು ಬಂಧನ…!


ಮಂಗಳೂರು: ಕೊಲೆ, ಸುಲಿಗೆ, ದಾಳಿ, ಎನ್.ಡಿ.ಪಿಎಸ್ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ಪರಾರಿಯಾಗಿದ್ದ ಆರೋಪಿಯ ಬಂಧಿಸಿದ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕು ನರಿಗಾನ ಗ್ರಾಮದ ಪಟ್ಟುಲಿಕೆ ನಿವಾಸಿ ನಜೀಮ್ @ ನಜ್ಜು (30) ಎಂದು ಗುರುತಿಸಲಾಗಿದೆ.
ನಜೀಮ್ ಮೇಲೆ ಕೊಣಾಜೆ, ಉಳ್ಳಾಲ, ಮಂಗಳೂರು ನಾರ್ತ್, ಬೇಗೂರು ಬೆಂಗಳೂರು ನಗರ, ಭಟ್ಕಳ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಆರೋಪಿ ಜಾಮೀನು ಪಡೆದ ಬಳಿಕ ಒಂದುವರೆ ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ಪರಾರಿಯಾಗಿದ್ದನು.
ನಜೀಮ್ ವಿರುದ್ಧ ಹೊರಡಿಸಲಾಗಿದ್ದ ವಾರೆಂಟ್ ಹಾಗೂ ಪ್ರೋಕ್ಲಮೇಷನ್ ಬಾಕಿ ಇದ್ದ ಹಿನ್ನೆಲೆಯಲ್ಲಿ, ವಿಶೇಷ ಕ್ರಮ ಕೈಗೊಂಡು ಆರೋಪಿಯನ್ನು ಬೆಂಗಳೂರು ನಗರದಿಂದ ಪತ್ತೆಹಚ್ಚಿ ಬಂಧಿಸಲಾಗಿದೆ.
ಆರೋಪಿಯ ವಿರುದ್ಧ ದಾಖಲಾಗಿರುವ ಪ್ರಕರಣಗಳು:
- ಅ.ಕ್ರ 326/2015, ಉಳ್ಳಾಲ ಪೊಲೀಸ್ ಠಾಣೆ – ಸೆ. 143, 147, 148, 447, 448, 504, 341, 307, 506, 109 r/w 149 IPC (PT)
- ಅ.ಕ್ರ 161/2016, ಕೊಣಾಜೆ ಪೊಲೀಸ್ ಠಾಣೆ – ಸೆ. 143, 147, 148, 341, 504, 506, 307 r/w 149 IPC (ಖುಲಾಸೆ)
- ಅ.ಕ್ರ 142/2019, ಭಟ್ಕಳ ಪೊಲೀಸ್ ಠಾಣೆ – 302, 201 IPC (ಪ್ರೋಕ್ಲಮೇಷನ್) (PT)
- ಅ.ಕ್ರ 125/2021, ಕೊಣಾಜೆ ಪೊಲೀಸ್ ಠಾಣೆ – 143, 147, 148, 504, 324, 323 r/w 149 IPC (PT)
- ಅ.ಕ್ರ 43/2022, ಕೊಣಾಜೆ ಪೊಲೀಸ್ ಠಾಣೆ – 447, 324, 504, 506 IPC (PT)
- ಅ.ಕ್ರ 54/2022, ಮಂಗಳೂರು ನಾರ್ತ್ ಪೊಲೀಸ್ ಠಾಣೆ – 323, 324, 397, 365, 342 r/w 34 IPC (PT)
- ಅ.ಕ್ರ 187/2022, ಬೇಗೂರು ಪೊಲೀಸ್ ಠಾಣೆ, ಬೆಂಗಳೂರು ನಗರ– 20(b), ಎನ್‌ಡಿಪಿಎಸ್ ಕಾಯ್ದೆ (PT)
- ಅ.ಕ್ರ 85/2023, ಉಳ್ಳಾಲ ಪೊಲೀಸ್ ಠಾಣೆ – ಸೆ. 8(c), 21, 21(c) ಎನ್‌ಡಿಪಿಎಸ್ ಕಾಯ್ದೆ (PT)
ಆರೋಪಿಯನ್ನು ಮಂಗಳೂರು ದಕ್ಷಿಣ ಉಪ ಆಯುಕ್ತರವರ ಮಾರ್ಗದರ್ಶನದಲ್ಲಿ ಕೊಣಾಜೆ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಭಂದಿಗಳಾದ ದಿನೇಶ್, ಶರೀಫ್ ಮತ್ತು ರಮೇಶ್ ಅವರ ಶ್ರಮದಿಂದ ಬೆಂಗಳೂರು ನಗರದಿಂದ ಬಂಧಿಸಲಾಗಿದೆ.








