Thursday, April 25, 2024
spot_imgspot_img
spot_imgspot_img

ಭಾರತದ ವಿರುದ್ಧದ ಸರಣಿ ಸೋಲಿನ ಹೊರತಾಗಿಯೂ ನಾವು ಉತ್ತಮ ಸ್ಥಾನದಲ್ಲಿ ಇದ್ದೇವೆ- ಇಂಗ್ಲೆಂಡ್ ತಂಡದ ಹಂಗಾಮಿ ನಾಯಕ ಜೋಸ್ ಬಟ್ಲರ್

- Advertisement -G L Acharya panikkar
- Advertisement -

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯಲ್ಲಿ ಭಾರತ ಗೆಲುವು ಸಾಧಿಸುವ ಮೂಲಕ ಮೂರು ಮಾದರಿಲ್ಲೂ ಟೀಮ್ ಇಂಡಿಯಾ ಸರಣಿ ಜಯಿಸಿದಂತಾಗಿದ್ದು ಇಂಗ್ಲೆಂಡ್ ತಂಡದ ಸುದೀರ್ಘ ಪ್ರವಾಸ ಅಂತ್ಯವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಇಂಗ್ಲೆಂಡ್ ತಂಡದ ಹಂಗಾಮಿ ನಾಯಕ ಜೋಸ್ ಬಟ್ಲರ್ ಭಾರತದ ವಿರುದ್ಧದ ಸರಣಿ ಸೋಲಿನ ನಂತರವೂ ನಾವು ಉತ್ತಮ ಸ್ಥಾನದಲ್ಲಿ ಇದ್ದೇವೆ ಎಂದು ಹೇಳಿದ್ದಾರೆ.

“ನಾವು ಈಗ ದೀರ್ಘ ಕಾಲದವರೆಗೆ ಅದ್ಭುತ ತಂಡವಾಗಿದ್ದೇವೆ. ನಾವು ಇಲ್ಲ ಎರಡು ಸರಣಿಗಳನ್ನು ಕಳೆದುಕೊಂಡಿದ್ದೇವೆ(ಏಕದಿನ ಹಾಗೂ ಟಿ20) ಆದರೆ ಈ ಎರಡು ಸರಣಿಗಳು ಕಳೆದ 11 ಸರಣಿಯಲ್ಲಿ ಕೇವಲ ಎರಡು ಸರಣಿಯಾಗಿದೆ” ಎಂದು ತಂಡದ ಸಾಮರ್ಥ್ಯದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

“ಹಾಗಾಗಿ ನಾವು ಇನ್ನು ಕಊಡ ಅತ್ಯುತ್ತಮವಾದ ತಂಡ. ನಮ್ಮಲ್ಲಿರುವ ಪ್ರತಿಭೆಗಳನ್ನು ನಾವು ವಿಸ್ತಾರ ಮಾಡುತ್ತಿದ್ದೇವೆ. ನಮ್ಮ ಕಡೆಯಲ್ಲಿ ಕೆಲ ಅದ್ಭುತವಾದ ಆಟಗಾರರಿದ್ದಾರೆ. ಮುಂಬರುವ ದಿನಗಳಲ್ಲಿ ಅವರಿಗೆ ಅವಕಾಶಗಳು ದೊರೆಯಲಿದೆ. ಅದು ಮತ್ತಷ್ಟು ಅದ್ಭುತವಾಗಿರಲಿದೆ” ಎಂದು ಜೋಸ್ ಬಟ್ಲರ್ ಹೇಳಿದ್ದಾರೆ.

ತಂಡದ ಸಾಮರ್ಥ್ಯ ವಿಸ್ತಾರಗೊಳ್ಳುತ್ತಾ ಉತ್ತಮವಾಗುತ್ತಿದೆ. ನಾವು ಯಾವ ಸಾಮರ್ಥ್ಯಕ್ಕೆ ಮಿತಿಗಳನ್ನು ಹಾಕಲು ನಾವು ಎಂದಿಗೂ ಬಯಸುವುದಿಲ್ಲ. ನಾವು ಯಾವುದೇ ಗಡಿಗಳನ್ನು ಹಾಕಿಕೊಳ್ಳದೆ ಅವುಗಳನ್ನು ತಳ್ಳಲು ಪ್ರಯತ್ನಿಸುತ್ತೇವೆ. ಇದನ್ನು ಮುಂದೆಯೂ ಮುಂದುವರಿಸಲಿದ್ದೇವೆ” ಎಂದು ಜೋಸ್ ಬಟ್ಲರ್ ಹೇಳಿದ್ದಾರೆ.

“ನಾವಿ ಇಲ್ಲಿಗೆ ಪಂದ್ಯಗಳನ್ನು ಗೆಲ್ಲಲು ಬಂದಿದ್ದೆವು. ನಾವು ಇಲ್ಲಿ ಪಂದ್ಯವನ್ನು ಗೆಲ್ಲಲು ಹಾಗೂ ಸರಣಿಯನ್ನು ಗೆಲ್ಲಲೆಂದೇ ಆಡಿದ್ದೇವೆ. ಆದರೆ ಟಿ20 ಅಥವಾ ಏಕದಿನ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಪಂದ್ಯಗಳಲ್ಲಿ ಅದನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಆ ಕಾರಣದಿಂದಾಗಿ ಖಂಡಿತಾ ನನಗೆ ಆ ಬಗ್ಗೆ ಅಸಮಾಧಾನಗಳು ಇದೆ” ಎಂದು ಜೋಸ್ ಬಟ್ಲರ್ ಹೇಳಿಕೆಯನ್ನು ನೀಡಿದ್ದಾರೆ.

- Advertisement -

Related news

error: Content is protected !!