Thursday, March 28, 2024
spot_imgspot_img
spot_imgspot_img

ಉಡುಪಿ: ದೈವದ ಚಾಕ್ರಿ ವರ್ಗದವರ ಸಮಸ್ಯೆಗಳನ್ನು ಪರಿಹರಿಸುವಂತೆ ಶಾಸಕ ಪ್ರಮೋದ್ ಮಧ್ವರಾಜ್ ಅವರಿಗೆ ಮನವಿ

- Advertisement -G L Acharya panikkar
- Advertisement -

ಅಖಿಲ ಭಾರತ ತುಳುನಾಡ ಧೈವಾರಾಧಕರ ಒಕ್ಕೂಟ (ರಿ ) ಉಡುಪಿ ಜಿಲ್ಲೆ ವತಿಯಿಂದ ಮಾಜಿ ಉಸ್ತುವರಿ ಸಚಿವರು ಹಾಗೂ ಮಾಜಿ ಶಾಸಕರಾದಂತಹ ಪ್ರಮೋದ್ ಮಧ್ವರಾಜ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಎರಡನೇ ಬಾರಿಯ ಕೊರೊನಾ ತುರ್ತು ಸಂದರ್ಭದಲ್ಲಿ ಸರ್ಕಾರದಿಂದ ದೈವ ಚಾಕ್ರಿ ವರ್ಗದವರಿಗೆ ಯಾವುದೇ ಪ್ಯಾಕೆಜ್ ಬರಲಿಲ್ಲ ಹಾಗೂ ಉಡುಪಿ ಮತ್ತು ಮಂಗಳೂರಿನಲ್ಲಿ ದೈವಸ್ಥಾನಗಳಲ್ಲಿ ನಡೆಯುವ ಮಾರಿಪೂಜೆ ದರ್ಶನ ಸೇವೆ ತಂಬಿಲ ಸೇವೆ ಹಾಗೂ ಮುಂತಾದ ಪೂಜಾ ಕಾರ್ಯಕ್ರಮಗಳಿಗೆ ಸರ್ಕಾರದ ಕಟ್ಟುನಿಟ್ಟಾದ 150 ಜನ ಸೀಮಿತಕ್ಕೆ ದೈವಾರಾಧನೆ ನಡೆಸಲು ಸರ್ಕಾರದಿಂದ ಅನುಮತಿ ಬಂದಿರಲಿಲ್ಲ ಇದರಿಂದ ದೈವ ಚಾಕ್ರಿಯವರು ತುಂಬ ಸಂಕಷ್ಟದಲ್ಲಿದ್ದಾರೆಂದು ಮನವಿ ಮಾಡಿಕೊಂಡರು

ಮನವಿಯನ್ನು ಪಡೆದುಕೊಂಡ ಮಾಜಿ ಶಾಸಕರು ಪ್ರಮೋದ್ ಮಧ್ವರಾಜ್ ಅವರು ನಿಮ್ಮೆಲ್ಲಾ ಸಮಸ್ಯೆಯನ್ನು ಈ ದಿನ ಮುಖ್ಯಮಂತ್ರಿ ಹಾಗೂ ಇದಕ್ಕೆ ಸಂಬಂಧಪಟ್ಟ ಸಚಿವರೊಂದಿಗೆ ಮಾತಾಡುತ್ತೇನೆ ಮತ್ತು ನಿಮ್ಮ ಯಾವುದೇ ಸಮಸ್ಯೆಗೆ ನಿಮ್ಮೊಂದಿಗೆ ಬೆಂಬಲವಾಗಿ ನಾನಿರುತ್ತೇನೆ ಎಂದು ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ರವಿ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ ಕೋಶಧಿಕಾರಿ ಹಾಗೂ ಬ್ರಹ್ಮವಾರ ಘಟಕದ ಅಧ್ಯಕ್ಷ ಶ್ರೀಧರ್ ಪೂಜಾರಿ ಹಾಗೂ ಜೊತೆ ಕಾರ್ಯದರ್ಶಿ ದಯೆಶಾ ಕೋಟ್ಯಾನ್ ಹಾಗೂ ನವೀನ್ ಕುಂಜಿಬೆಟ್ಟು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!