Friday, March 29, 2024
spot_imgspot_img
spot_imgspot_img

4ನೇ ಬಾರಿಯೂ ಇಂದೋರ್ ಗೆ ದೇಶದ ಅತ್ಯಂತ ಸ್ವಚ್ಛ ನಗರಿ ಪಟ್ಟ

- Advertisement -G L Acharya panikkar
- Advertisement -

ಸ್ವಚ್ಛ ಸರ್ವೇಕ್ಷಣಾ 2020ರ ಫಲಿತಾಂಶ ಪ್ರಕಟಗೊಂಡಿದೆ. ಸತತ 4ನೇ ಬಾರಿಯೂ ಮಧ್ಯಪ್ರದೇಶದ ಇಂದೋರ್ ಅತ್ಯಂತ ಸ್ವಚ್ಛ ನಗರಿ ಪ್ರಶಸ್ತಿಯನ್ನು ಮಡಿಗೇರಿಸಿಕೊಂಡಿದೆ.

ಎರಡನೇ ಸ್ಥಾನವನ್ನು ಗುಜರಾತ್ ನ ಸೂರತ್ ಅಲಂಕರಿಸಿಕೊಂಡಿದ್ದು, ಮೂರನೇ ಸ್ಥಾನವನ್ನು ಮಹಾರಾಷ್ಟ್ರದ ನವೀ ಮುಂಬೈ ಪಡೆದುಕೊಂಡಿದೆ. ಕಳೆದ 5 ವರ್ಷಗಳಿಂದ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ ನೀಡಲಾಗುತ್ತಿದೆ. ಮೊದಲ ವರ್ಷ ಮೈಸೂರು ಭಾರತದ ಅತ್ಯಂತ ಸ್ವಚ್ಛ ನಗರಿ ಎಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಈ ಬಾರಿ ಮೈಸೂರು 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಶಸ್ತಿ ಘೋಷಣೆ ಮಾಡಿದ್ರು. ಈ ವೇಳೆ ಮಾತನಾಡಿದ ಅವರು, ನಾನು ಕೆಲವು ವರ್ಷಗಳ ಹಿಂದೆ ಜಪಾನಿನ ನಿಯೋಗದ ಸದಸ್ಯರೊಡನೆ ಇಂದೋರ್ಗೆ ಭೇಟಿ ನೀಡಿದ್ದೆ, ನಾವು ನಗರವನ್ನು ತಲುಪಿದಾಗ, ಜಪಾನಿಯರು ಇಂದೋರ್ನ ವಿವಿಧ ಸ್ಥಳಗಳಿಗೆ ಹೋಗುವುದನ್ನು ನಾನು ನೋಡಿದೆ. ನಾನು ಅವನನ್ನು ‘ನೀವು ಏನು ಮಾಡುತ್ತಿದ್ದೀರಿ?’ ಎಂದು ಕೇಳಿದೆ. ಅವರು ಹೇಳಿದರು ‘ನಾನು. ಕೊಳೆಯನ್ನು ಹುಡುಕಲು ಪ್ರಯತ್ನಿಸುತ್ತಿದೆ, ಆದರೆ ಸಾಧ್ಯವಾಗಲಿಲ್ಲ . ಇನ್ನು 3ರಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮೈಸೂರು ಪ್ರಥಮ ಸ್ಥಾನ ಪಡೆದುಕೊಂಡಿದೆ. ನಗರದ ಸಾಧನೆಗೆ ಇದಕ್ಕಿಂತ ದೊಡ್ಡ ಸಾಕ್ಷಿ ಇರಬಹುದೆಂದು ನಾನು ಭಾವಿಸುವುದಿಲ್ಲ ಎಂದರು.

ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ಟಾಪ್ 20 ಸ್ವಚ್ಛ ನಗರಗಳ ಪಟ್ಟಿ:

1.ಇಂದೋರ್, ಮಧ್ಯಪ್ರದೇಶ
2.ಸೂರತ್, ಗುಜರಾತ್
3.ನವಿ ಮುಂಬೈ, ಮಹಾರಾಷ್ಟ್ರ
4.ಚತ್ತೀಸ್ಗಢ, ಅಂಬಿಕಾಪುರ
5.ಮೈಸೂರು, ಕರ್ನಾಟಕ
6.ವಿಜೈವಾಡ, ಆಂಧ್ರಪ್ರದೇಶ
7.ಅಹಮದಾಬಾದ್, ಗುಜರಾತ್

  1. ನವದೆಹಲಿ
  2. ಚಂದ್ರಪುರ, ಮಹಾರಾಷ್ಟ್ರ
  3. ಖಾರ್ಗೋನ್, ಮಧ್ಯಪ್ರದೇಶ
  4. ರಾಜ್ಕೋಟ್, ಗುಜರಾತ್
  5. ತಿರುಪತಿ, ಆಂಧ್ರಪ್ರದೇಶ
  6. ಜಮ್ಶೆಡ್ಪುರ, ಜಾರ್ಖಂಡ್
  7. ಭೋಪಾಲ್, ಮಧ್ಯಪ್ರದೇಶ
  8. ಗಾಂಧಿನಗರ, ಗುಜರಾತ್
  9. ಚಂಡೀಗರ್
  10. ಧುಲೆ, ಮಹಾರಾಷ್ಟ್ರ
  11. ರಾಜನಂದಗಾಂವ್, ಚತ್ತೀಸ್ಗಢ
  12. ಬಿಲಾಸ್ಪುರ್, ಚತ್ತೀಸ್ಗಡ
  13. ಉಜ್ಜಯಿನಿ, ಮಧ್ಯಪ್ರದೇಶ

- Advertisement -

Related news

error: Content is protected !!