Sunday, April 28, 2024
spot_imgspot_img
spot_imgspot_img

ಅಮೇರಿಕಾದಲ್ಲಿ ಚಾಕು ಇರಿತಕ್ಕೊಳಗಾಗಿ ಭಾರತೀಯ ವಿದ್ಯಾರ್ಥಿ ಸಾವು..!

- Advertisement -G L Acharya panikkar
- Advertisement -

ಅಮೇರಿಕಾದ ಫಿಟ್‌ನೆಸ್ ಸೆಂಟರ್‌ನಲ್ಲಿ ಚಾಕು ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಭಾರತ ಮೂಲದ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತ ಪಟ್ಟ ಭಾರತ ಮೂಲದ ವಿದ್ಯಾರ್ಥಿ ವರುಣ್ ರಾಜ್ ಪುಚಾ ಹಾಗೂ ದುಷ್ಕರ್ಮಿ ಜೋರ್ಡಾನ್ ಆಂಡ್ರೇಡ್ ಎಂದು ಗುರುತಿಸಲಾಗಿದೆ.

ವಾಲ್ಪಾರೈಸೊ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ವರುಣ್ ಅಕ್ಟೋಬರ್ 29 ರಂದು ಸಾರ್ವಜನಿಕ ಜಿಮ್‌ನಲ್ಲಿದ್ದಾಗ ದುಷ್ಕರ್ಮಿ ಆತನ ತಲೆಗೆ ಚಾಕುವಿನಿಂದ ಇರಿದಿದ್ದ, ವಿದ್ಯಾರ್ಥಿ ಅಗಲಿಕೆ ಬಳಿಕ ಮಾಹಿತಿ ನೀಡಿರುವ ವಾಲ್ಪರೈಸೊ ವಿಶ್ವವಿದ್ಯಾಲಯ, ವರುಣ್ ರಾಜ್ ಪುಚ್ಚಾ ಅಗಲಿಕೆ ಸುದ್ದಿಯನ್ನು ನಾವು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತಿದ್ದೇವೆ. ನಮ್ಮ ಕ್ಯಾಂಪಸ್ ಸಮುದಾಯದ ಭಾಗವಾಗಿದ್ದ ವಿದ್ಯಾರ್ಥಿಯನ್ನು ಕಳೆದುಕೊಂಡಿದ್ದೇವೆ. ಈ ನಷ್ಟಕ್ಕೆ ನಾವು ತೀವ್ರವಾಗಿ ವಿಷಾದಿಸುತ್ತೇವೆ. ನಾವು ಅಗಲಿದ ವಿದ್ಯಾರ್ಥಿ ವರುಣ್‌ನ ಕುಟುಂಬ ಮತ್ತು ಸ್ನೇಹಿತರೊಂದಿಗಿದ್ದೇವೆ ಎಂದು ಹೇಳಿದೆ.

ತೆಲಂಗಾಣದ ಖಮ್ಮಂ ಮೂಲದ ವರುಣ್ 2022ರ ಆಗಸ್ಟ್‌ನಲ್ಲಿ ಅಮೆರಿಕಗೆ ತೆರಳಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದ. ಮುಂದಿನ ವರ್ಷ ತಮ್ಮ ಕೋರ್ಸ್ ಮುಗಿದ ಬಳಿಕ ಸ್ವದೇಶಕ್ಕೆ ಮರಳುವ ನಿರೀಕ್ಷೆಯಲ್ಲಿದ್ದ. ಆದರೆ ಅನಿರೀಕ್ಷಿತ ಘಟನೆಯಿಂದ ವಿದ್ಯಾರ್ಥಿಯ ಕುಟುಂಬ ಹಾಗೂ ವಿಶ್ವವಿದ್ಯಾಲಯ ಆಘಾತಕ್ಕೊಳಗಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!