Friday, April 26, 2024
spot_imgspot_img
spot_imgspot_img

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ನವದೆಹಲಿ: ಅಹಮದಾಬಾದ್​ನಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಮಾ.12ರಂದು ಪ್ರಧಾನಿ ಮೋದಿ ಚಾಲನೆ ನೀಡಿದರು. ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದ ಮೋದಿ ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಈ ಮಹೋತ್ಸವ 15 ಆಗಸ್ಟ್ 2022 ರ ಸ್ವಾತಂತ್ರ್ಯೋತ್ಸವದ 75 ವಾರ ಮುನ್ನ ಪ್ರಾರಂಭವಾಗಿದೆ. 2023 ರ ಆಗಸ್ಟ್ 15 ರವರೆಗೆ ಈ ಮಹೋತ್ಸವವನ್ನ ನಡೆಸುತ್ತೇವೆ.

ಸ್ವಾತಂತ್ರ್ಯದ ಸಂಗ್ರಾಮ, 75 ಐಡಿಯಾಗಳು, 75 ಸಾಧನೆಗಳು, ಮತ್ತು 75 ಪರಿಹಾರಗಳು ಈ ಐದು ಕಂಬಗಳು ದೇಶ ಮುನ್ನಡೆಯಲು ಸ್ಫೂರ್ತಿಯಾಗುತ್ತವೆ ಎಂದು ಮೋದಿ ಹೇಳಿದರು.

ದೇಶ ಲೋಕಮಾನ್ಯ ತಿಲಕ್ ಅವರ ಪೂರ್ಣ ಸ್ವರಾಜ್ಯ, ಆಜಾದ್ ಹಿಂದ್ ಫೌಜ್​ರ ದೆಲ್ಲಿ ಚಲೋ, ಕ್ವಿಟ್ ಇಂಡಿಯಾ ಚಳವಳಿಗಳನ್ನ ಎಂದಿಗೂ ಮರೆಯೋದಿಲ್ಲ. ನಾವು ಮಂಗಲ್ ಪಾಂಡೆ, ತಾತ್ಯಾ ಟೋಪಿ, ರಾಣಿ ಲಕ್ಷ್ಮೀ ಬಾಯಿ, ಚಂದ್ರಶೆಖರ್ ಆಜಾದ್, ಭಗತ್ ಸಿಂಗ್, ಪಂಡಿತ್ ನೆಹರೂ ಸರ್ದಾರ್ ಪಟೇಲ್, ಅಂಬೇಡ್ಕರ್​ರಿಂದ ಸ್ಫೂರ್ತಿ ಪಡೆಯುತ್ತೇವೆ ಎಂದರು.

- Advertisement -

Related news

error: Content is protected !!